ಚಾಮರಾಜನಗರ : ಮನೆಯ ಗೋಡೆಯಲ್ಲಿಯೇ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿ ಆರೋಪಿ ತಗ್ಲಾಕೊಂಡಿರುವ ಘಟನೆಯೊಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ.
ನಿಟ್ರೆ ಗ್ರಾಮದ ಮಂಜು ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದನು. ಅಕ್ರಮವಾಗಿ ಈತ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ ವೇಳೆ ಮನೆಯಲ್ಲೇ ಈತ ಮದ್ಯ ಶೇಕರಣೆ ಮಾಡಲು ಗೋಡೆ ಕೊರೆದು ರಹಸ್ಯ ಚೇಂಬರ್ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಇದೇ ವೇಳೆ ಪೊಲೀಸರು 8 ಲೀಟರ್ ಮದ್ಯ, 5 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದು, ಆರೋಪಿ ಮಂಜು ಎಂಬಾತನನ್ನು ಅಬಕಾರಿ ಸಿಬ್ಬಂದಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.