ಕರ್ನಾಟಕ

ಬೀದಿನಾಯಿ, ಕತ್ತೆಗಳಿಂದ ಸಾರ್ವಜನಿಕರಿಗೆ ತೊಂದರೆ..!

ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಬಿದ್ದ ಪ್ರಕರಣಗಳು ಸಾಕಷ್ಟಿವೆ. ಸ್ಥಳೀಯ ಜೇಡರ ದಾಸಿಮಯ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಜಮಖಂಡಿ ಜಿಲ್ಲೆಯ ಕುಡಚಿಯ ರಾಜ್ಯ ಹೆದ್ದಾರಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೀದಿ ಜಾನುವಾರುಗಳು ಹಾಗೂ ಕತ್ತೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ತಿರುಗಾಡಲು ಸಾಧ್ಯಾವಗದ ಸ್ಥಿತಿ ನಿರ್ಮಾಣವಾಗಿದೆ.

ಹೌದು, ಕತ್ತೆ ಮತ್ತು ಬೀದಿ ನಾಯಿಗಳ ಕಾಟದಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಬಿದ್ದ ಪ್ರಕರಣಗಳು ಸಾಕಷ್ಟಿವೆ. ಸ್ಥಳೀಯ ಜೇಡರ ದಾಸಿಮಯ್ಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ, ಅಂಗಡಿಯವರು ಸಂಜೆ ಕಸ ಹಾಕಿ ಹೋಗುತ್ತಾರೆ. ಈ ಕಸದಲ್ಲಿನ ಆಹಾರ ತಿನ್ನಲು ಸಾಕಷ್ಟು ನಾಯಿಗಳು ಇಲ್ಲಿ ಬರುತ್ತವೆ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಕತ್ತೆಗಳ ಮಾಲೀಕರಿಗೆ ನೋಟಿಸ್ ನೀಡಿದ್ದು,ಕೆಲವು ಬಾರಿ ದಂಡವು ಕೂಡ ಹಾಕಲಾಗಿದೆ.