ಬೆಂಗಳೂರು - ಬೆಂಗಳೂರು ಕ್ಲೀನ್ ಸಿಟಿ ಆಗಿರಲು ಕಸದ ಸಾಗಾಣಿಕೆ ಮಾಡುವ ವಾಹನ ಚಾಲಕರ ಪಾತ್ರ ಹಿರಿದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸ್ತಾರ ದೊಡ್ಡದಾಗುತ್ತಲೇ ಕಸದ ಸಮಸ್ಯೆ ದೊಡ್ಡದಾಗಿದೆ.
ಕಸದ ವಿಲೇವಾರಿ ಮಾಡುವ ಟಿಪ್ಪರ್ ಆಟೋ ಹಾಗೂ ಕಾಂಪ್ಯಾಕ್ಟರ್ ಹೊರಗುತ್ತಿಗೆ ಚಾಲಕರು ತಮ್ಮ ಉದ್ಯೋಗವನ್ನ ಖಾಯಂಗೊಳಿಸುವಂತೆ ಒತ್ತಾಯಿಸಿ ಈ ಹೋರಾಟಕ್ಕೆ ಧುಮುಕಿದ್ದಾರೆ.
ಡಿ.2 ರಿಂದ ಅಮರಣಾಂತ ಉಪವಾಸಕ್ಕೆ ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ಕರೆ ನೀಡಿದೆ. 10 ಸಾವಿರ ನೌಕರರನ್ನ ಇವತ್ತಿಗೂ ಹೊರಗುತ್ತಿಗೆ ಅಡಿಯಲ್ಲೇ ದುಡಿಸುತ್ತಿದೆ. ಇದನ್ನ ಖಂಡಿಸಿ ಧರಣಿಗೆ ನೌಕರರು ಧುಮುಕಲಿದ್ದಾರೆ.