ವೈರಲ್

ಎದೆನೋವು ಎಂದರೂ ಪರೀಕ್ಷೆ ಬರೆಯಿಸಿದ ಶಿಕ್ಷಕ.. ತರಗತಿಯಲ್ಲೇ ವಿದ್ಯಾರ್ಥಿ ಸಾವು!

ಹತ್ತನೇ ತರಗತಿ ಓದುತ್ತಿದ್ದ ಬಾಲಕ, ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ, ಹೀಗಾಗಿ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಿನ್ನೆ ಶಾಲೆಯಲ್ಲಿ ಕಿರುಪರೀಕ್ಷೆ ಇತ್ತು, ಹೀಗಾಗಿ ಅನಾರೋಗ್ಯ ನಡುವೆ ವಿದ್ಯಾರ್ಥಿ ಶಾಲೆಗೆ ಬಂದಿದ್ದ.

ಯಾದಗಿರಿ: ಪರೀಕ್ಷೆ ಬರೆಯುವಾಗ ತರಗತಿಯಲ್ಲಿ ವಿದ್ಯಾರ್ಥಿಗೆ ಎದೆನೋವು ಕಾಣಿಸಿಕೊಂಡಿದೆ, ತಕ್ಷಣವೇ ಶಿಕ್ಷಕನಿಗೆ ತಿಳಿಸಿದರೂ ವಿದ್ಯಾರ್ಥಿಯನ್ನ ಗದರಿಸಿ ತರಗತಿಯಲ್ಲೇ ಕುರಿಸಿದ ಪರಿಣಾಮ, ಹೃದಯಾಗಾತದಿಂದ ಕುಸಿದುಬಿದ್ದು ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.

ಚೇತನ್(17) ಮೃತ ವಿದ್ಯಾರ್ಥಿ. ಹತ್ತನೇ ತರಗತಿ ಓದುತ್ತಿದ್ದ ಬಾಲಕ, ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ, ಹೀಗಾಗಿ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಿನ್ನೆ ಶಾಲೆಯಲ್ಲಿ ಕಿರುಪರೀಕ್ಷೆ ಇತ್ತು, ಹೀಗಾಗಿ ಅನಾರೋಗ್ಯ ನಡುವೆ ವಿದ್ಯಾರ್ಥಿ ಶಾಲೆಗೆ ಬಂದಿದ್ದ. ಪರೀಕ್ಷೆ ಬರೆಯುವಾಗಲೂ ವಿಪರೀತ ವಾಂತಿ ಮಾಡಿಕೊಂಡಿದ್ದ ಚೇತನ್ ತೀವ್ರ ಅಸ್ವಸ್ಥಗೊಂಡಿದ್ದ. ಬೇಗ ಮನೆಗೆ ಹೋಗಬೇಕು, ತನಗೆ ಎದೆ ನೋವು ಆಗುತ್ತಿರುವ ಬಗ್ಗೆ ಶಿಕ್ಷಕನಿಗೆ ತಿಳಿಸಿದ್ದ. ಆದರೆ ಶಿಕ್ಷಕ ಪರೀಕ್ಷೆ ವೇಳೆ ಎದೆನೋವು ಎಂದು ನಾಟಕ ಮಾಡುತ್ತಾನೆ ಎಂದು ಗದರಿಸಿ ತರಗತಿಯಲ್ಲಿ ಕೂರಿಸಿದ್ದಾನೆ. ಇತ್ತ ಚೇತನ್ ಸಹೋದರಿ ಸಹ ಪೋಷಕರಿಗೆ ಕರೆ ಮಾಡಲು ಬಿಡಿ ಎಂದು ವಿನಂತಿಸಿಕೊಂಡಿದ್ದಾಳೆ ಅದರೆ ಈ ಶಿಕ್ಷಕ ಅವಳಿಗೂ ಗದರಿಸಿದ್ದಾನೆ.

ಎದೆಯಲ್ಲಿ ನೋವು ಅನುಭವಿಸುತ್ತ ತರಗತಿಯಲ್ಲಿ ಕೂತ ವಿದ್ಯಾರ್ಥಿಗೆ ಇದ್ದಕ್ಕಿದ್ದಂತೆ ಎದೆನೋವು ತೀವ್ರಗೊಂಡು, ಕುಸಿದು ಬಿಳುತ್ತಿದ್ದಂತೆ ತರಗತಿಯೇ ವಿದ್ಯಾರ್ಥಿಗಳೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ವಿದ್ಯಾರ್ಥಿಯ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.  ಸದ್ಯ ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.