ವೈರಲ್

ಆಯತಪ್ಪಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಸಾವು

ಕಾಲೇಜಿನ ಮೊದಲ ಮಹಡಿಯಿಂದ ಬಿದಿದ್ದು, ಮೃತ ವಿದ್ಯಾರ್ಥಿನಿ ಗೋಕಾಕ್ ತಾಲೂಕಿನ ಶಿಂದಿ ಕುರುಬೇಟ್ ಗ್ರಾಮದವಳಾಗಿದ್ದಾಳೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ : ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ದುರ್ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ. ಕಾಲೇಜು ಕಟ್ಟಡದಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ರಾಂಚಿ: ಕಟ್ಟಡದಿಂದ ಜಿಗಿದು ಕಿರಿಯ ವೈದ್ಯ ಆತ್ಮಹತ್ಯೆ, ವೈದ್ಯೆಯ ಸ್ಥಿತಿ ಗಂಭೀರ

ವಸತಿ ಶಾಲೆಯ ಮೊದಲನೇ ಮಹಡಿಯಿಂದ ಬಿದ್ದು ಆಫ್ರಿನ್ ಜಾಮದಾರ್  (17) ಎಂಬ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟ ದುರ್ಧೈವಿಯಾಗಿದ್ದಾಳೆ. ಕಾಲೇಜಿನ ಮೊದಲ ಮಹಡಿಯಿಂದ ಬಿದಿದ್ದು, ಮೃತ ವಿದ್ಯಾರ್ಥಿನಿ ಗೋಕಾಕ್ ತಾಲೂಕಿನ ಶಿಂದಿ ಕುರುಬೇಟ್ ಗ್ರಾಮದವಳಾಗಿದ್ದಾಳೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಇಂದು ಪರೀಕ್ಷೆ ಹಿನ್ನೆಲೆ, ವಿದ್ಯಾರ್ಥಿನಿ ಮಧ್ಯ ರಾತ್ರಿ ಮೊದಲ ಮಹಡಿಯಲ್ಲಿ ಓದುತ್ತ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ.  ವಿದ್ಯಾರ್ಥಿನಿ ತಾನೇ ಬಿದ್ದಿದ್ದಾಳಾ, ಆಯತಪ್ಪಿ ಬಿದ್ದಳಾ ಅಥವಾ ಬೇರೆ ಎನಾದ್ರೂ ಆಗಿದೆಯಾ ಅಂತಾ ತನಿಖೆ ಮೂಲಕ ತಿಳಿಯಬೇಕಿದೆ.