ವಿದೇಶ

ಕಾಬೂಲ್‌ ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ… ತಾಲಿಬಾನ್‌ ಸಚಿವ ಸಾವು

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ತಾಲಿಬಾನ್‌ ನಿರಾಶ್ರಿತರ ಖಾತೆ ಸಚಿವ ಖಲೀಲ್‌ ಉರ್‌ ರಹಮಾನ್‌ ಹಕ್ಕಾನಿ ಮೃತಪಟ್ಟಿದಾರೆ.

ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ತಾಲಿಬಾನ್‌ ನಿರಾಶ್ರಿತರ ಖಾತೆ ಸಚಿವ ಖಲೀಲ್‌ ಉರ್‌ ರಹಮಾನ್‌ ಹಕ್ಕಾನಿ ಮೃತಪಟ್ಟಿದಾರೆ.

ಕಾಬೂಲ್‌ ನಲ್ಲಿರುವ ತಾಲಿಬಾನ್‌ ನಿರಾಶ್ರಿತರ ಸಚಿವಾಲಯದ ಆವರಣದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹಕ್ಕಾನಿ ಮತ್ತು ಇತರೆ ಇಬ್ಬರು ಮೃತಪಟ್ಟಿದಾರೆ. 2021 ರಲ್ಲಿ ತಾಲಿಬಾನ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿಐಪಿಗಳನ್ನು ಗುರಿಯಾಗಿಸಿಕೊಂಡು ಮಾಡಿದ ಮೊದಲ ದಾಳಿ ಇದಾಗಿದೆ.

ಖಲೀಲ್‌ ಉರ್‌ ರಹಮಾನ್‌ ಹಕ್ಕಾನಿ ತಾಲಿಬಾನ್ ಆಡಳಿತದಲ್ಲಿ ಪ್ರಭಾವಿ ನಾಯಕನಾಗಿರುವ ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿಯವರ ಚಿಕ್ಕಪ್ಪ. ಇದುವರೆಗೆ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಸದ್ಯಕ್ಕೆ ಹೊತ್ತುಕೊಂಡಿಲ್ಲ.

ಕುರಿತು ತಾಲಿಬಾನ್ಸರ್ಕಾರದ ವಕ್ತಾರರಾದ ಜಬಿಹುಲ್ಲಾ ಮುಜಾಹಿದ್  ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಸ್ಲಾಂ ಧರ್ಮ ರಕ್ಷಣೆಗಾಗಿ ಹಕ್ಕಾನಿ ಜೀವವನ್ನೇ ಮುಡಿಪಾಗಿಟ್ಟಿದ್ದರು. ಅವರೊಬ್ಬ ನಿಜವಾದ ಧಾರ್ಮಿಕ ಯೋಧ ಎಂದು ಬಣ್ಣಿಸಿದ್ದಾರೆ.

ಇನ್ನೂ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಖಂಡಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ.