ಕರ್ನಾಟಕ

ಬಿಜೆಪಿ ಸೇರಿದ ಬಳಿಕ ಸೈಡ್ ಲೈನ್ ಆದ ಸುಮಲತಾ..!

ಮಾಜಿ ಸಂಸದೆ ಸುಮಲತಾ ಅಂಬರೀಶ್ ರಾಜಕಾರಣದಲ್ಲಿ ಸೈಲೆಂಟ್ ಆಗಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.

ನಟಿ ಕಂ ಮಾಜಿ ಸಂಸದೆ ಸುಮಲತಾ ಲೋಕಸಭಾ ಚುನಾವಣೆ ಬಳಿಕ ಸೈಲೆಂಟ್ ಆಗಿದ್ದಾರೆ. ಅದಕ್ಕೆ ಕೆಲವರು ಆರೋಗ್ಯದ ಕಾರಣ ಹೇಳಿದ್ರೆ ಕೆಲವರು ಸುಮಲತಾ ಬಿಜೆಪಿಗೆ ಹೋಗಿ ತಮ್ಮ ರಾಜಕೀಯ ಭವಿಷ್ಯವನ್ನ ಕತ್ತಲಿಗೆ ತೆಗೆದುಕೊಂಡು ಹೋದ್ರು ಇದು ಅವರ ಸ್ವಯಂಕೃತ ಅಪರಾಧ ಅಂತಿದ್ದಾರೆ.. ಹಾಗಾದ್ರೆ ನಿಜವಾಗಲೂ ಸುಮಲತಾ ಯಾಕೆ ಸೈಲೆಂಟ್ ಆಗಿ ಇದ್ದಾರೆ..ಸುಮಲತಾ ಅವರನ್ನ ಬೇಕು ಅಂತ ಟಾರ್ಗೆಟ್ ಮಾಡಿದ್ರಾ ಅನ್ನೋ ವಿಚಾರವನ್ನ ಕೆದಕಿದಾಗ ಸಮಯ ನ್ಯೂಸ್ ಗೆ ಎಕ್ಸಕ್ಲೂಸಿವ್ ಮಾಹಿತಿ ಸಿಕ್ಕಿದೆ..

ಸುಮಲತಾಗೆ ಮಂಡ್ಯ ಸೇಫ್

ದಿವಂಗತ ಅಂಬರೀಶ್ ಅವರನ್ನ ಸತತವಾಗಿ ಗೆಲ್ಲಿಸಿ ಕಳುಹಿಸಿದ್ದ ಮಂಡ್ಯದ ಜನರಿಗೆ ಅವರ ಕುಟುಂಬದ ಮೇಲೆ ಅಷ್ಟೇ ಪ್ರೀತಿ ಇತ್ತು ಹೀಗಾಗಿಯೇ 2019 ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಪಕ್ಷೇತರವಾಗಿ ನಿಂತ್ರು ಜನರ ವೋಟ್ ಹಾಕಿ ದೆಹಲಿಯ ಸಂಸತ್ ಭವನ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟರು.

ಆದ್ರೆ ಸುಮಲತಾ ಮಾಡಿದ್ದೇನು 

ಇಡೀ ದೇವೇಗೌಡರ ಕುಟುಂಬವನ್ನ ಅಂದು ಎದುರು ಹಾಕಿಕೊಂಡಿದ್ದ ಮಂಡ್ಯದ ಜನ ನಿಖಿಲ್ ಕುಮಾರಸ್ವಾಮಿ ಗೆ ಸೋಲಿನ ರುಚಿ ತೋರಿಸಿದ್ರು.ಆದ್ರೆ ಸುಮಲತಾ ಮಾತ್ರ ಐದು ವರ್ಷಗಳ ಸಂಸದೆ ಆಗಿದ್ದಾಗ ಕೇವಲ ಗೆಸ್ಟ್ ಅಫಿಯರೆನ್ಸ್ ಪಾತ್ರ ಮಾಡಿದ್ರು.ಮಂಡ್ಯದ ಜನರಿಗೆ ಕಷ್ಟ ಬಂದಾಗ ಕಣ್ಣೀರು ಒರೆಸಲಿಲ್ಲ ಬರಗಾಲ ಬಂದಾಗ ಜನರಿಗೆ ಧೈರ್ಯ ಹೇಳಿಲ್ಲ. ಕಾವೇರಿ ವಿಚಾರದಲ್ಲಿ ಸುಮಲತಾ ಸರಿಯಾದ ನಿಲುವು ತೆಗೆದುಕೊಳ್ಳಲಿಲ್ಲ ಅನ್ನೋ ಅಸಮಾಧಾನ ಇದ್ದೆ ಇತ್ತು.

ಆದ್ರೆ 2024 ರಲ್ಲಿ ಚಿತ್ರಣವೇ ಬದಲಾಯಿತು

ಮುಂದೆ ಸುಮಲತಾ ಮಂಡ್ಯಗೆ ಬಂದ್ರೆ ಬುದ್ಧಿ ಕಲಿಸಬೇಕು. ರೆಬಲ್ ಸ್ಟಾರ್ ಪತ್ನಿಯಿಂದ ಇದನ್ನ ನಾವು ಎಕ್ಸ್ಪೆಕ್ಟ್ ಮಾಡಿರಲಿಲ್ಲ ಅಂತ ಅಂತ ಅಂದುಕೊಂಡ್ರಿ ಈ ನಡುವೆ ವಿಧಾನ ಸಭಾ ಚುನಾವಣೆ ಬಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು ಹೀಗಾಗಿ ಬಿಜೆಪಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿ‌ ಕ್ಷೇತ್ರ ತ್ಯಾಗ ಮಾಡುವಂತೆ ಸುಮಲತಾ ಗೆ ಬಿಜೆಪಿ ಹೈಕಮಾಂಡ್ ಆದೇಶ ಮಾಡ್ತು.ಅಲ್ಲದೇ ಬಿಜೆಪಿಯಲ್ಲಿ ನಿಮಗೆ ಸೂಕ್ತ ಸ್ಥಾನಮಾನ ಕೊಡ್ತೀವಿ ಅನ್ನೋ ಭರವಸೆ ಸಹ ಕೊಟ್ರು.ಕೊನೆಗೆ 2024ರಲ್ಲಿ ಮೈತ್ರಿ ಧರ್ಮದ ಅನುಸಾರ ಕ್ಷೇತ್ರವನ್ನ ಕುಮಾರಸ್ವಾಮಿ ಗೆ ಬಿಟ್ಟು ಕೊಟ್ಟು ಅಲ್ಲಿಂದ ಕಾಲ್ಕಿತ್ತರು..

ಬಿಜೆಪಿ ಸೇರಿದ್ದೇ ಸುಮಲತಾಗೆ ಡ್ಯಾಮೇಜ್

ಹಳೆ ಮೈಸೂರು ಭಾಗದಲ್ಲಿ ಸುಭದ್ರವಾಗಿರುವ ಜೆಡಿಎಸ್ ಅಲ್ಲಿ ಕಾಂಗ್ರೆಸ್ ಜತೆಗೆ ಮತ್ತೊಂದು ಪಕ್ಷ ಗಟ್ಟಿಯಾದ್ರೆ ತನ್ನ ಅಸ್ತಿತ್ವಕ್ಕೆ ಕಷ್ಟವಾಗಲಿದೆ ಅಂತ ಲೆಕ್ಕಾಚಾರ ಹಾಕಿರುವ ದೊಡ್ಡ ಗೌಡರು ಏನೇ ಮೈತ್ರಿ ಮಾಡಿಕೊಂಡರು ಮೈತ್ರಿ ಪಕ್ಷಗಳನ್ನ ನಿಯಂತ್ರಣ ಮಾಡುವ ವಿದ್ಯೆ ಕಲಿತು ಬಿಟ್ಟಿದ್ದಾರೆ.ಹೀಗಾಗಿ ಮಂಡ್ಯ ಬಿಟ್ಟ ಬಳಿಕ ಸುಮಲತಾ ಸಹ ಸೈಡ್ ಲೈನ್ ಆಗಿದ್ದಾರೆ..

ಲೋಕಸಭಾ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೂ ಯಾವುದೇ ಚುನಾವಣೆಗಳಲ್ಲಿ ರಾಜ್ಯ ಬಿಜೆಪಿ ಸುಮಲತಾ ಅವರಿಗೆ ಅಧಿಕೃತ ಅಹ್ವಾನ ಕೊಡ್ತಿಲ್ಲ ದೆಹಲಿ ನಾಯಕರ ಜತೆ ಮಾತನಾಡಿಕೊಂಡು ಬಂದಿದ್ದಾರೆ ಅವರೇ ದಾರಿ ತೋರಿಸಲಿ ಅನ್ನೋ ಲೆಕ್ಕಾಚಾರದಲ್ಲಿ ರಾಜ್ಯ ನಾಯಕರು ಇದ್ದಾರೆ.ಅಂದು ಬಿಜೆಪಿಗೆ ಸೇರಿ ನಿಮಗೆ ಸೂಕ್ತ ಸ್ಥಾನ ಮಾನ ಕೊಡ್ತೀವಿ ಎಂದಿದ್ದ ಬಿಜೆಪಿ ಹೈಕಮಾಂಡ್ ತುಟಿಕ್ ಪಿಟಿಕ್ ಎನ್ನದೇ ಮೌನಕ್ಕೆ ಶರಣಾಗಿರುವುದು ಸುಮಲತಾ ಸೈಡ್ ಲೈನ್ ಆಗಲು ಕಾರಣವಾಗಿದೆ.

ಸುಮಲತಾ ಮಂಡ್ಯದಲ್ಲಿ ಸಪೋರ್ಟ್ ಮಾಡಿದ್ರೆ ಗೆಲ್ತೀವಿ ಎಂದು ಅಂದು ಹೇಳಿದ್ದ ಕುಮಾರಸ್ವಾಮಿ ಇಂದು ಚನ್ನಪಟ್ಟಣಕ್ಕೆ ಬರುವಂತೆ ಕೇಳ್ತಿಲ್ಲ. ಇವರಿಗೂ ಸಹ ಪ್ರತಿಷ್ಠೆ ಅಡ್ಡ ಬಂದು‌ ಬೈ ಎಲೆಕ್ಷನ್ ಟೈಮ್ ಲ್ಲಿ ಸೈಲೆಂಟ್ ಆಗಿದ್ದಾರೆ.

ಒಟ್ಟಾರೆ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ ಅಂಬರೀಶ್ ಸೆಲೆಕ್ಟ್ ಪೊಲಿಟಿಕಲ್ ರಿಲೇಶನ್ ಶಿಪ್ ಈಗಿನ ರಾಜಕೀಯದಲ್ಲಿ ವರ್ಕೌಟ್ ಆಗದಿರುವುದು ಮಾತ್ರ ಪಕ್ಕಾ ಆಗಿ ಸೈಡ್ ಲೈನ್ ಆಗಿದ್ದಾರೆ.