ಕರ್ನಾಟಕ

ಉಸಿರು ಇರುವವರೆಗೂ ದರ್ಶನ್ ನನ್ನ ಮಗನೇ; ಸುಮಲತಾ

ದರ್ಶನ್​ ಆರೋಗ್ಯ ಸುಧಾರಿಸಬೇಕಿದೆ. ಎಲ್ಲಾ ರೋಪ ಮುಕ್ತವಾಗಿ ದರ್ಶನ್ ಹೊರ ಬರುವ ನಂಬಿಕೆ ಇದೆ ಎಂದು ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಭೇಟಿ ವಿಚಾರದ ಬಗ್ಗೆ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ನಮ್ಮ ಸಂಬಂಧ ಹಾಗೆಯೇ ಇದೆ. ದರ್ಶನ್ ನನ್ನ ಉಸಿರು ಇರುವವರೆಗೂ ನನ್ನ ಮಗನೇ ಎಂದು ಹೇಳಿದ್ದಾರೆ. ಅಲ್ಲದೇ ನಾನು ದರ್ಶನ್ ಪತ್ನಿ ಜೊತೆ ಟಚ್ ನಲ್ಲೇ ಇದ್ದೇನೆ. ದರ್ಶನ್ ಆರೋಗ್ಯ ಸುಧಾರಿಸಬೇಕಿದೆ. ಎಲ್ಲಾ ರೋಪ ಮುಕ್ತವಾಗಿ ದರ್ಶನ್ ಹೊರ ಬರುವ ನಂಬಿಕೆ ಇದೆ ಎಂದಿದ್ದಾರೆ.

ಈ ವಿಚಾರದಲ್ಲಿ ಸತ್ಯಾಂಶ ಹೊರ ಬಂದು ದರ್ಶನ್ ನಿರಪರಾಧಿ ಎಂದು ಸಾಬೀತಾಗಬೇಕು. ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.