ಮತ್ತೆ ಮಂಡ್ಯದಲ್ಲೇ ನನ್ನ ರಾಜಕಾರಣ ಪುನಾರಂಭವಾಗುತ್ತದೆ ಎಂದು, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಅವರು, ಸ್ವಲ್ಪ ರೆಸ್ಟ್ ಬೇಕಿತ್ತು ಹಾಗಾಗಿ ಪಾಸ್ ತೆಗೆದುಕೊಂಡಿದ್ದೆ. 5 ವರ್ಷ ನನಗಾಗಿ ಟೈಮ್ ಇರಲಿಲ್ಲ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಿದ್ದೇನೆ. ಜನವರಿ ಬಳಿಕ ಮಂಡ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಲಿದ್ದೇನೆ ಎಂದಿದ್ದಾರೆ.
ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ ಅವಶ್ಯಕತೆ ಬಿದ್ದಾಗ ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಅಂತ ಹೈಕಮಾಂಡ್ ಗೆ ತಿಳಿಸಿದ್ದೇನೆ ಎಂದಿದ್ದಾರೆ. ಅದಲ್ಲದೇ ಸ್ವಾತಂತ್ರ್ಯ ಬಂದು 77 ವರ್ಷವಾಗಿದೆ, ಆ ಗುರಿ ಇಟ್ಟುಕೊಂಡು 77 ಬೈಕ್ ವಿತರಣೆಯಾಗಿದೆ. ಯಾವ ಸಂಸದರು ಕೂಡ ಕೊಟ್ಟಿಲ್ಲ, ನಾನು ಎಂಪಿ ಅನುದಾನದಲ್ಲಿ ಕೊಟ್ಟಿದ್ದೇನೆ. ಆದಷ್ಟು ಮಟ್ಟಕ್ಕೆ ಹಳ್ಳಿ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.