ವಿದೇಶ

ಬಾಹ್ಯಾಕಾಶದಲ್ಲೇ ಸಿಲುಕಿದ ಗಗನಯಾತ್ರಿಗಳು: ಸುನಿತಾ ವಿಲಿಯಮ್ಸ್​ಗೆ ಕಾಡ್ತಿದೆ ಅನಾರೋಗ್ಯದ ಸಮಸ್ಯೆ!

ಬಾಹ್ಯಾಕಾಶದೊಳಗೆ ಕಂಗಾಲಾಗಿರುವ ಗಗನಯಾತ್ರಿಗಳನ್ನ ವಾಪಸ್​ ಭೂಮಿಗೆ ಕರೆತರಲು NASA ನಾನಾ ಪ್ರಯತ್ನಗಳನ್ನ ನಡೆಸುತ್ತಿದೆ.

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ತಿಂಗಳ ಹಿಂದೆ ಬಾಹ್ಯಾಕಾಶ ಪ್ರವಾಸಕ್ಕೆ ಹೋಗಿದ್ದ ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರೋದೇ ಡೌಟ್ ಆಗಿ ಉಳಿದು ಬಿಟ್ಟಿದೆ. ಈ ಮಧ್ಯೆ ಬಾಹ್ಯಾಕಾಶದಲ್ಲಿರುವ ಸುನಿತಾ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ.

ಬಾಹ್ಯಾಕಾಶದೊಳಗೆ ಕಂಗಾಲಾಗಿರುವ ಗಗನಯಾತ್ರಿಗಳನ್ನ ವಾಪಸ್ ಭೂಮಿಗೆ ಕರೆತರಲು NASA ನಾನಾ ಪ್ರಯತ್ನಗಳನ್ನ ನಡೆಸುತ್ತಿದೆ. ಆದರೂ ಕೂಡ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳೋಕೆ ಇನ್ನೂ ಸಾಕಷ್ಟು ದಿನಗಳು ಹಿಡಿಯಲಿವೆ ಎನ್ನಲಾಗುತ್ತಿದೆ. ಇದರ ನಡುವೆ ಸುನಿತಾ ವಿಲಿಯಮ್ಸ್ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿವೆ. ವರದಿಗಳ ಪ್ರಕಾರ ಸುನಿತಾ ವಿಲಿಯಮ್ಸ್ ಅವರ ಕಣ್ಣುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ದಷ್ಠಿದೋಷ ಉಂಟಾಗಿದೆ ಎನ್ನಲಾಗುತ್ತಿದೆ. ಮೈಕ್ರೋಗ್ರಾವಿಟಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವವಿರುತ್ತದೆ.