ವಿದೇಶ

ಬಾಹ್ಯಾಕಾಶ ಜೀವನ ಹೀಗೂ ಇರುತ್ತಾ..? ಬಾಹ್ಯಾಕಾಶದಲ್ಲೇ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರೋ ಸುನೀತಾ ವಿಲಿಯಮ್ಸ್, ವಿಡಿಯೋ ವೈರಲ್

ತಾಂತ್ರಿಕ ದೋಷದಿಂದ ಭೂಮಿಗೆ ಮರಳದೇ ಬಾಹ್ಯಾಕಾಶದಲ್ಲೇ ತಂಗಿರೋ ಗಗನಯಾತ್ರಿ ಸುನೀತಾ ವಿಲಿಯಮ್ಸ್ಗೆ ಹುಟ್ಟು ಹಬ್ಬದ ಸಂಭ್ರಮ, ಬಾಹ್ಯಾಕಾಶದ ವಿಡಿಯೋ ವೈರಲ್..

ಯಾರಿಗೆ ತಾನೆ ಹಕ್ಕಿಗಳ ರೀತಿ ಸ್ವಚ್ಛಂದವಾಗಿ ಹಾರಾಡೋ ಆಸೆ ಇರೋದಿಲ್ಲ ಹೇಳಿ, ಆದ್ರೆ ಸಾಮಾನ್ಯ ಜನಕ್ಕೆ ಅದು ಸಾಧ್ಯವಾಗದ ಮಾತು, ಗಗನಯಾತ್ರಿಗಳಿಗೆ ಮಾತ್ರ ಹಾಗಲ್ಲ, ಅವರು ಸ್ವಚ್ಛಂದವಾಗಿ ಹಾರಾಡಬಹುದು..ಸ್ನೇಹಿತರೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧ್ಯಯನಕ್ಕೆ ಹೋಗಿರೋ  ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಕಳೆದ ಜೂನ್ 5ರಂದು ವಾಒಸಾಗಬೇಕಿತ್ತು. ಆದ್ರೆ ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿರೋ ಹಿನ್ನಲೆಯಲ್ಲಿ ಅವರು ಮುಂದಿನ ವರ್ಷ ವಾಪಸಾಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಆದರೆ ಇದುವರೆಗೂ ಅವರು ಬದುಕಿರುವುದೇ ಕಷ್ಟ ಎನ್ನುವ ಬಗ್ಗೆ ವಾದಗಳೂ ಹುಟ್ಟಿಕೊಂಡಿತ್ತು. ಇದರ ನಡುವಯೇ ನೋಡಿ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ, ಈ ಹಿಂದೆ 2003 ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ ಅವರಂತೆಯೇ ಸುನೀತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುಗದಂಥಾ ಪರಿಸ್ಥಿತಿ ಸುನೀತಾ ವಿಲಿಯಮ್ಸ್ ಅವರಿಗೂ ಬರಲಿದೆಯೇ ಎಂಬ ಆತಂಕವೂ ಎದುರಾಗಿತ್ತು, ಅಂದಹಾಗೆ. ನಾಸಾ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಅವರು, ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಇವರು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ರು.

ಇದೀಗ ಸುನೀತಾ ಅವರು ತಮ್ಮ 59ನೇ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 19ರಂದು ಬಾಹ್ಯಾಕಾಶದಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ. ಸುನೀತಾ, ಸೆಪ್ಟೆಂಬರ್ 19, 1965ರಂದು ಓಹಿಯೋದ ಯೂಕ್ಲಿಡ್ನಲ್ಲಿ ಡಾ.ದೀಪಕ್ ಮತ್ತು ಬೋನಿ ಪಾಂಡ್ಯ ದಂಪತಿಗೆ ಜನಿಸಿದ್ರು, ಅವರು ನೀಧಮ್ ಹೈಸ್ಕೂಲ್, ನೀಧಮ್, ಮ್ಯಾಸಚೂಸೆಟ್ಸ್, 1983ರಲ್ಲಿ ವ್ಯಾಸಂಗ ಮಾಡಿದ್ರು ಮತ್ತು 1987ರಲ್ಲಿ ಅಮೆರಿಕದ ನೇವಲ್ ಅಕಾಡೆಮಿಯ ಭೌತಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ ್ಸ್ ಅನ್ನು ಪಡೀತಾರೆ. ಅವರು ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 1995ರಲ್ಲಿ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದ್ರು..

ಬಾಹ್ಯಾಕಾಶದಲ್ಲಿರೋ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಜೀವನ ಹೇಗಿರುತ್ತೆ..? ಆಕಾಶದಲ್ಲಿ ತೇಲಾಡುತ್ತಲೇ ಇರುವ ಸಂದರ್ಭ ಹೇಗಿರುತ್ತೆ ಇತ್ಯಾದಿ ಇರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಖುದ್ದು ಸುನೀತಾ ವಿಲಿಯಮ್ಸ್ ಅವರೇ ವಿವರಣೆ ನೀಡಿದ್ದು, ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಂದಹಾಗೆ, ಸುನೀತಾ ಫೆಬ್ರವರಿ 2025ರಲ್ಲಿ ಸ್ಪೇಸ್ ಎಕ್ಸ್ನ ಡ್ರ್ಯಾಗನ್ ಕ್ರೂ ಸ್ಪೇಸ್ ಕ್ಯಾಪ್ಸುಲ್ನಲ್ಲಿ ಭೂಮಿಗೆ ಮರಳಲು ಸಿದ್ದರಾಗಿದ್ದಾರೆ. ಈ ಬಾರಿ ಅವರು 8 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಗಮನಾರ್ಹವಾಗಿ, ವಿಲಿಯಮ್ಸ್ ಒಟ್ಟು 322 ದಿನಗಳನ್ನು ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎನ್ನುವುದೇ ಎಲ್ಲರ ಆಶಯ