ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಸಭೆ ಅಧಿವೇಶನ ಕಲಾಪದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಪೂರಕ ಅಂದಾಜು ಮಂಡನೆ ಮಾಡಿದ್ದಾರೆ. 2024-25ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳನ್ನು ಸಚಿವ ಕೃಷ್ಣಭೈರೇಗೌಡ ಮಂಡಿಸಿದ್ದಾರೆ.
ಇನ್ನು ಧನ ವಿನಯೋಗ ಅಧಿನಿಯಮದ ಆಧಾರದಲ್ಲಿ, ಹೊಸ ಸೇವೆಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರಕ ಅಥವಾ ಹೆಚ್ಚಿನ ವೆಚ್ಚದ ಅವಶ್ಯಕತೆ ಉಂಟಾದರೆ, ಅಂದಾಜು ಮಾಡಿದ ವೆಚ್ಚದ ಮೊಬಲಗನ್ನು ತೋರಿಸುವ ಮತ್ತೊಂದು ವಿವರಣೆಯನ್ನು ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಲು ಸಂವಿಧಾನದ 205(1)(ಎ)ರ ಅನುಚ್ಛೇದವು ಅವಕಾಶ ಕಲ್ಪಿಸಿದೆ.