ಕರ್ನಾಟಕ

ದರ್ಶನ್‌ಗೆ ಮತ್ತೆ ಬೇಲ್‌ ನೀಡದಂತೆ ಸುಪ್ರೀಂ ಮೊರೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೆಡಿಕಲ್‌ ಬೇಲ್‌ ಮೇಲೆ ಜೈಲಿಂದ ತಾತ್ಕಾಲಿಕ ರಿಲೀಫ್‌ ಪಡೆದಿರುವ ವಿರುದ್ಧ ಕಾನೂನು ಸಮರಕ್ಕೆ ಪೊಲೀಸರು ಮುಂದಾಗಿದ್ದಾರೆ..

ಮೈಸೂರು : ಬೆನ್ನುನೋವಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ಗೆ ಶಾಕ್‌ ಎದುರಾಗಿದೆ.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೆಡಿಕಲ್‌ ಬೇಲ್‌ ಮೇಲೆ ಜೈಲಿಂದ ತಾತ್ಕಾಲಿಕ ರಿಲೀಫ್‌ ಪಡೆದಿರುವ ವಿರುದ್ಧ ಕಾನೂನು ಸಮರಕ್ಕೆ ಪೊಲೀಸರು ಮುಂದಾಗಿದ್ದಾರೆ..

ಈ ಬಗ್ಗೆ ಮೈಸೂರಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್‌, ದರ್ಶನ್ ಚಿಕಿತ್ಸೆ ಪಡೆಯುವ ಸಲುವಾಗಿ ಬೇಲ್‌ನಲ್ಲಿದ್ದಾರೆ, ಟ್ರೀಟ್ಮೆಂಟ್‌ ಪಡೆದ ನಂತರ ಮತ್ತೆ ವಾಪಾಸ್ ಹೋಗಬೇಕಾಗುತ್ತದೆ.. ಆರೋಪಿ ದರ್ಶನ್‌ ಮತ್ತೆ ಮೆಡಿಕಲ್‌ ಬೇಲ್‌ ಕೇಳುವ ವಿಚಾರ ನಮಗೆ ಗೊತ್ತಿಲ್ಲ, ದರ್ಶನ್‌ಗೆ ಮತ್ತೆ ಬೇಲ್ ಕೊಡಬಾರದು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡುವ ಪ್ರಕ್ರಿಯೆ ಮಾಡ್ತಿದ್ದೇವೆ ಎಂದಿದ್ದಾರೆ.. ಅಷ್ಟೇ ಅಲ್ಲದೇ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುವ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುವ ಕೆಲಸವಾಗುತ್ತಿದೆ, ಸಾಕ್ಷ್ಯ ಸಂಗ್ರಹ ನಂತರ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುತ್ತೇವೆ ಎಂದಿದ್ದಾರೆ..