ಕರ್ನಾಟಕ

ಸಸ್ಪೆನ್ಸ್ ಥ್ರಿಲ್ಲರ್ 'ಎಫ್.ಐ.ಆರ್ ತೆರೆಗೆ

6 to 6' ಈವಾರ ತೆರೆಗೆ ಬರಲಿರುವ ಸಿನಿಮಾ

ಬೆಂಗಳೂರು - ಸಸ್ಪೆನ್ಸ್ ಥ್ರಿಲ್ಲರ್ 'ಎಫ್.ಐ.ಆರ್. 6 to 6'  ಈ ವಾರ ತೆರೆಗೆ ಬರಲಿದೆ. ಕೆ.ವಿ.ರಮಣರಾಜ್ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಾಯಕನಾಗಿ ಅಭಿನಯಿಸಿರುವ ಚಿತ್ರ ಇದಾಗಿದೆ. 

ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್. 6 to 6' ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಪಟ್ಟಾಭಿಷೇಕೆಂಬ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯರಮೇಶ್ ಅವರ  ನಿರ್ಮಾಣದ ಈ ಚಿತ್ರಕ್ಕೆ ಓಂಜಿ  ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಆಕ್ಷನ್, ಥ್ರಿಲ್ಲಿಂಗ್  ಕಥೆಯಿದು. ಯುವಕನೊಬ್ಬ  ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಫೇಸ್ ಮಾಡುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಥ್ರಿಲ್ಲಿಂಗ್ ಆಗಿ ಹೇಳಲು  ಚಿತ್ರತಂಡ ಪ್ರಯತ್ನಿಸಿದೆ. 35 ದಿನ‌ ಪೂರ್ತಿ ರಾತ್ರಿ ವೇಳೆಯಲ್ಲೇ ಶೂಟ್ ಮಾಡಲಾಗಿದೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ೨ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದು , ಯಶ್ ಶೆಟ್ಟಿ ನಾಗೇಂದ್ರ ಅರಸ್, ಯಶ್ ಶೆಟ್ಟಿ, ಸಿರಿರಾಜ್, ಸ್ವಾತಿ, ಯಶಾ ಶೆಟ್ಟಿ ಹೀಗೆ ಸಾಕಷ್ಟು ಕಲಾವಿದರಿದ್ದಾರೆ .