ಕರ್ನಾಟಕ

ಗೃಹಿಣಿ ಅನುಮಾನಾಸ್ಪದ ಸಾವು, ಕೊಲೆ ಶಂಕೆ..!

ಕುಡಿದು, ಗಾಂಜಾ ಸೇವಿಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆಂದು ಜಾಹ್ನವಿ ಪೋಷಕರು ಆರೋಪ ಮಾಡಿದ್ದು, ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಆರೋಪ ಮಂಡ್ಯದಲ್ಲಿ ಕೇಳಿ ಬಂದಿದೆ. ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಜಾಹ್ನವಿ (26) ಎಂಬ ಗೃಹಿಣಿ ಮೃತಪಟ್ಟಿದ್ದು, ಗೃಹಿಣಿಯನ್ನ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲಾಗಿದೆ ಎಂಬ ಆರೋಪ ಜಾಹ್ನವಿಯ ಪತಿಯ ಮೇಲೆ ಕೇಳಿಬಂದಿದೆ. 

ನಾಲ್ಕು ವರ್ಷದ ಹಿಂದೆ ಯಶ್ವಂತ್ ಎಂಬಾತನೊಂದಿಗೆ ಜಾಹ್ನವಿ ವಿವಾಹವಾಗಿದ್ದರು. ಕಾಂಗ್ರೆಸ್ ಮುಖಂಡನಾಗಿರುವ ಯಶ್ವಂತ್ ಮದುವೆಯಾದಾಗಿನಿಂದಲೂ ಜಾಹ್ನವಿಗೆ ಕಿರುಕುಳವನ್ನ ನೀಡುತ್ತಿದ್ದ. ಕುಡಿದು ಮನಸ್ಸೋ ಇಚ್ಛೆ ಹಲ್ಲೆ ಮಾಡ್ತಿದ್ದ ಬಗ್ಗೆ ಕೂಡ ಆರೋಪ ಕೇಳಿ ಬಂದಿತ್ತು. ಗುರುವಾರ ಬಾವಿಗೆ ಬಿದ್ದು ಜಾಹ್ನವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಆದರೆ, ಪೋಷಕರು ಬಂದು ನೋಡಿದಾಗ ಜಾಹ್ನವಿಯ ಮೃತದೇಹದ ಮೈಮೇಲೆ, ಮುಖದ ಮೇಲೆ ರಕ್ತದ ಕಲೆಗಳಿದ್ದವು.  ಹಾಗಾಗಿ ಹಲ್ಲೆ ನಡೆಸಿ, ಕೊಲೆ ಮಾಡಿರುವ ಬಗ್ಗೆ ಕುಟುಂಬಸ್ಥರು ಶಂಕೆಯನ್ನ ವ್ಯಕ್ತಪಡಿಸಿದ್ದಾರೆ. ಕುಡಿದು, ಗಾಂಜಾ ಸೇವಿಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆಂದು ಜಾಹ್ನವಿ ಪೋಷಕರು ಆರೋಪ ಮಾಡಿದ್ದು, ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.