ಸಚಿವ ಸತೀಶ್ ಜಾರಕಿಹೊಳಿ ಅವರ ಸರಳತೆ ನೋಡಿ ಸಿಎಂ ಸ್ಥಾನ ಕೊಡಬೇಕು ಎಂದು, ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಅಂಕಲಗಿ-ಕುಂದರಗಿ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಸತೀಶ್ ಜಾರಕಿಹೊಳಿ ಅವರಿಗೆ ಸರಳತೆ, ಸೌಜನ್ಯತೆ ಇದೆ, ಏನೇ ಸಮಸ್ಯೆ ಇದ್ದರೂ ಸ್ಪಂದಿಸುವ ಗುಣ ಇದೆ ಎಂದು ಹೇಳಿದ್ದಾರೆ. ಅಲ್ಲದೇ ನಾನು ಸಣ್ಣ ಹುಡಗ ಇದ್ದಾಗಿನಿಂದ ಸತೀಶ ಅವರನ್ನ ನೋಡಿದ್ದೇನೆ. ಲೋಕೋಪಯೋಗಿ ಸಚಿವರಾಗೇ ಇಷ್ಟ ಕೆಲಸ ಮಾಡಿದ್ದಾರೆ ಇನ್ನು ರಾಜ್ಯದ ಚುಕ್ಕಾಣಿ ಕೊಟ್ಟರೆ ಎಷ್ಟ ಕೆಲಸ ಮಾಡಬಹುದು ಎಂದು ಊಹಿಸಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಚುಕ್ಕಾಣಿ ಒಮ್ಮೆ ಸತೀಶ ಜಾರಕಿಹೊಳಿ ಹಿಡಿಯಬೇಕು. ಇನ್ನಷ್ಟು ಉನ್ನತ ಹುದ್ದೆಯಲ್ಲಿ ಇದ್ದರೆ ಇನ್ನಷ್ಟು ಕೆಲಸ ಮಾಡಲಿಕ್ಕೆ ಅನುಕೂಲ ಆಗುತ್ತೆ. ಶಾಸಕರಾದ ನಂತರ ಜಿಲ್ಲೆಯಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ನೀವು ಮುಂದಿನ ದಿನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಅವರಿಗೆ ತಿಳಿಸಿದ್ದಾರೆ.