ವೈರಲ್

ಸರ್ಕಾರಿ ಕಾರಿನಲ್ಲಿ ಸಿಲುಕಿದ್ದ ಶವವನ್ನು 30 ಕಿ.ಮೀ ದೂರ ಎಳೆದುಕೊಂಡು ಹೋದ ತಹಶೀಲ್ದಾರ್..?!

ಅಪಘಾತ ಸಂಭವಿಸಿದಾಗ ವಾಹನದಲ್ಲಿದ್ದ ನೈಬ್ ತಹಶೀಲ್ದಾರ್ ಶೈಲೇಶ್ ಕುಮಾರ್ ಅವಸ್ಥಿ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಶಿಫಾರಸು ಮಾಡಿದ್ದಾರೆ.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನನ್ಪಾರಾದ ತಹಶೀಲ್ದಾರ್ ಚಲಾಯಿಸುತ್ತಿದ್ದ ವಾಹನವೊಂದು ಬೈಕ್ ಸವಾರ ಗುರುವಾರ ರಾತ್ರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ. ನನ್ಪಾರಾದ ತಹಶೀಲ್ದಾರ್ ಅವರ ಸರ್ಕಾರಿ ವಾಹನವು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ಮತ್ತು ಅವರ ಶವವನ್ನು 30 ಕಿ.ಮೀ ದೂರ ಎಳೆದೊಯ್ದಿದೆ ಎಂದು ಆರೋಪಿಸಲಾಗಿದೆ.

ಮೃತರನ್ನು ಪಯಾಗ್ಪುರ ನಿವಾಸಿ ನರೇಂದ್ರ ಕುಮಾರ್ ಹಲ್ದರ್ (35) ಎಂದು ಗುರುತಿಸಲಾಗಿದ್ದು, ಗುರುವಾರ ಸಂಜೆ ನನ್ಪಾರಾ-ಬಹ್ರೈಚ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದಾಗ ವಾಹನದಲ್ಲಿದ್ದ ನೈಬ್ ತಹಶೀಲ್ದಾರ್ ಶೈಲೇಶ್ ಕುಮಾರ್ ಅವಸ್ಥಿ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಶಿಫಾರಸು ಮಾಡಿದ್ದಾರೆ. ವಾಹನದ ಚಾಲಕ ಮೆರಾಜ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆಯನ್ನು ದೃಢಪಡಿಸಿದ ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ, "ಅಪಘಾತದ ಸಮಯದಲ್ಲಿ ಮೃತ ನರೇಂದ್ರ ಹಲ್ದಾರ್ ಮತ್ತು ತಹಶೀಲ್ದಾರ್ ಅವರ ಚಾಲಕ ಮೆರಾಜ್ ಅಹ್ಮದ್ ಅವರ ಸ್ಥಳವನ್ನು ಪತ್ತೆಹಚ್ಚಲಾಯಿತು ಮತ್ತು ಶವವನ್ನು 30 ಕಿ.ಮೀ ದೂರ ನನ್ಪಾರಾಕ್ಕೆ ಎಳೆದೊಯ್ದಿರುವುದು ದೃಢಪಟ್ಟಿದೆ" ಎಂದು ಹೇಳಿದರು.