ವೈರಲ್

ರಾಜಕೀಯ ದುರುದ್ದೇಶದಿಂದ ಹಲ್ಲೆ: ತಲ್ವಾರ್ ಹಿಡಿದು ಕೊಲೆ ಬೆದರಿಕೆ..

ರಾಮಪ್ಪ ಪೂಜೇರಿ ಎಂಬುವವರ ಮೇಲೆ ಮಿಲನಗೌಡ ಪಾಟೀಲ್ ಎಂಬುವವರಿಂದ ಹಲ್ಲೆ ಆರೋಪ ಮಾಡಿದ್ದು, ರಾಮಪ್ಪ ಪೂಜೇರಿ ಎಂಬುವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ರಾಮಪ್ಪನ ಮೇಲೆ ಮಿಲನಗೌಡ ಪಾಟೀಲ್ ಸಿಟ್ಟಾಗಿ ಹಲ್ಲೆ ನಡೆಸಿದ್ದಾರೆ.

ಬೆಳಗಾವಿ : ರಾಜಕೀಯ ದುರುದ್ದೇಶದಿಂದ ಕುಟುಂಬದ ಮೇಲೆ ಹಲ್ಲೆ ಮಾಡಿದ ಘಟನೆಯೊಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಪೂಜೇರಿ ತೋಟದಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ಕುಟುಂಬದ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ರಾಮಪ್ಪ ಪೂಜೇರಿ ಎಂಬುವವರ ಮೇಲೆ ಮಿಲನಗೌಡ ಪಾಟೀಲ್ ಎಂಬುವವರಿಂದ ಹಲ್ಲೆ ಆರೋಪ ಮಾಡಿದ್ದು, ರಾಮಪ್ಪ ಪೂಜೇರಿ ಎಂಬುವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು.  ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ರಾಮಪ್ಪನ ಮೇಲೆ  ಮಿಲನಗೌಡ ಪಾಟೀಲ್ ಸಿಟ್ಟಾಗಿ ಹಲ್ಲೆ ನಡೆಸಿದ್ದಾರೆ.

 

ಈ ಸಂಬಂಧ ಮಿಲನಗೌಡ ಪಾಟೀಲ್ ಎಂಬುವರು ರಾಮಪ್ಪನ ಮನೆಗೆ ಬಂದು ಹಲ್ಲೆ ಮಾಡಿದ್ದು, ರಾಮಪ್ಪನ ಪತ್ನಿಯ ಮಾಂಗಲ್ಯ ಸರ ಹರಿದು ಹಾಕಿ ಕುಟುಂಬಸ್ಥರ ಮೇಲೆ ಹಲ್ಲೆ‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವಾಚ್ಚ ಶಬ್ದಗಳಿಂದ ನಿಂದಿಸಿ ಮಹಿಳೆ‌ ಹಾಗೂ ಪುರುಷರ ಮೇಲೆ ಹಲ್ಲೆ ನಡೆಸಿದ್ದಾರೆ. ಮಿಲನಗೌಡ ಪಾಟೀಲ್ ಕುಟುಂಬಸ್ಥರು ಹೆಂಗಸರು, ಗಂಡಸರು ಎನ್ನದೇ ಹಲ್ಲೆ ನಡೆಸಿದ್ದಾರೆ.

ಇದೇ ವೇಳೆ ಮಿಲನಗೌಡ ಕುಟುಂಬದ ಮಹಿಳೆಯೊಬ್ಬಳು ತಲ್ವಾರ್ ಹಿಡಿದು ಕೊಲೆ ಬೆದರಿಕೆ ಹಾಕಿದ್ದಾಳೆ. ಹಲ್ಲೆ ಮಾಡುವ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನ ಪೊಲೀಸರು ಬಂಧಿಸದ್ದಕ್ಕೆ ಹಲ್ಲೆಗೊಳಗಾದವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.