ವೈರಲ್

ಪಾಠ ಕಲಿಸಬೇಕಾದವರಿಂದಲೇ ದುರ್ನಡತೆ.. ವಿದ್ಯಾರ್ಥಿನಿಯರಿಗೆ ಬಿಯರ್ ಕುಡಿದು ಡ್ಯಾನ್ಸ್ ಮಾಡುವಂತೆ ಡಿಮ್ಯಾಂಡ್

ಮಡಿಕೇರಿ ಪ್ರವಾಸಕ್ಕೆ ಹೋಗಿದ್ದ ವೇಳೆ, ಪ್ರಾಂಶುಪಾಲರು ಕೂಡ ಬಿಯರ್ ಕುಡಿದಿದ್ದಾರೆ ಎನ್ನಲಾಗಿದ್ದು, ಮೂವರು ವಿದ್ಯಾರ್ಥಿನಿಯರನ್ನು ಕೋಣೆಯಲ್ಲಿ ಕೂಡಿಹಾಕಿ ಬಿಯರ್ ಕುಡಿಯುವಂತೆ ಪೀಡಿಸಿದ್ದರು ಎನ್ನಲಾಗಿದೆ.

ಕನಕಪುರ ಪಟ್ಟಣದ ರೂರಲ್ ಪಿಯು ಕಾಲೇಜಿನ ಮೂವರು ಉಪನ್ಯಾಸಕರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.  ಉಪನ್ಯಾಸಕರೇ ವಿದ್ಯಾರ್ಥಿನಿಯರಿಗೆ ಬಿಯರ್ ಕುಡಿಸಿ, ಡ್ಯಾನ್ಸ್ ಮಾಡುವಂತೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೂವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶ ನೀಡಿದೆ. ಉಪನ್ಯಾಸಕರಾದ ವಿಶ್ವನಾಥ್, ಲಕ್ಷ್ಮೀಶ್, ನಾಗೇಶ್ ಎಂಬುವರ ವಿರುದ್ಧ ದೂರು ದಾಖಲಾಗಿದ್ದು, ಅಕ್ಟೋಬರ್ 9ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಮಡಿಕೇರಿ ಪ್ರವಾಸಕ್ಕೆ ಹೋಗಿದ್ದ ವೇಳೆ, ಪ್ರಾಂಶುಪಾಲರು ಕೂಡ ಬಿಯರ್ ಕುಡಿದಿದ್ದಾರೆ ಎನ್ನಲಾಗಿದ್ದು, ಮೂವರು ವಿದ್ಯಾರ್ಥಿನಿಯರನ್ನು ಕೋಣೆಯಲ್ಲಿ ಕೂಡಿಹಾಕಿ ಬಿಯರ್ ಕುಡಿಯುವಂತೆ ಪೀಡಿಸಿದ್ದರು ಎನ್ನಲಾಗಿದೆ. ಅಲ್ಲದೇ ತಮ್ಮ ಜೊತೆ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.