ಕ್ರೀಡೆಗಳು

ಅಡಿಲೇಡ್‌ ಟೆಸ್ಟ್‌… ಟೀಂ ಇಂಡಿಯಾ 180 ಕ್ಕೆ ಆಲೌಟ್‌

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ ಟೀಂ ಇಂಡಿಯಾ 180 ರನ್‌ಗಳಿಗೆ ಆಲೌಟಾಗಿದೆ.

ಅಡಿಲೇಡ್‌: ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ ಟೀಂ ಇಂಡಿಯಾ 180 ರನ್‌ಗಳಿಗೆ ಆಲೌಟಾಗಿದೆ.

ಟಾಸ್‌ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಪರ್ತ್‌ ಟೆಸ್ಟ್‌ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಟೀಂ ಇಂಡಿಯಾಗೆ ಪಂದ್ಯದ ಮೊದಲ ಎಸೆತದಲ್ಲೇ ಆಘಾತ ಎದುರಾಗಿತ್ತು. ಯಶಸ್ವಿ  ಜೈಸ್ವಾಲ್‌ ಶೂನ್ಯಕ್ಕೆ ಔಟಾದರು. ಆ ಬಳಿಕ ಕೆ.ಎಲ್‌. ರಾಹುಲ್‌ ಮತ್ತು ಶುಭಮಾನ್‌ ಗಿಲ್‌ 69 ರನ್‌ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ರಾಹುಲ್‌ 37 ರನ್‌ ಗಳಿಸಿ ಔಟಾದರೆ, ಗಿಲ್‌ 31 ರನ್‌ಗೆ ಔಟಾದರು. ವಿರಾಟ್‌ ಕೊಹ್ಲಿ 7 ರನ್‌ ಗಳಿಸಿ ಔಟ್‌ ಆಗಿದ್ದರು.

ಮಧ್ಯಮ ಕ್ರಮಾಂಕದಲ್ಲೂ ಬ್ಯಾಟರ್‌ ಗಳು ಕ್ರೀಸ್‌ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ರಿಷಭ್‌ ಪಂತ್‌ 21, ರೋಹಿತ್‌ ಶರ್ಮಾ 3 ರನ್‌ ಮಾತ್ರ ಗಳಿಸಿದರು. ಇನ್ನು ಇನಿಂಗ್ಸ್‌ ಕೊನೆಯಲ್ಲಿ ಆಲ್ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ 42 ರನ್‌ ಸಿಡಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು. ಆರ್‌. ಅಶ್ವಿನ್‌ 22 ರನ್‌ ಗಳಿಸಿದರು.

ಆಸ್ಟ್ರೇಲಿಯಾ ತಂಡದ ಪರ ಮಿಚೆಲ್‌ ಸ್ಟಾರ್ಕ್‌ 6 ವಿಕೆಟ್‌ ಪಡೆದರೆ, ಸ್ಕಾಟ್‌ ಬೊಲಾಂಡ್‌ 2 ಮತ್ತು ನಾಯಕ ಪ್ಯಾಟ್‌ ಕಮ್ಮಿನ್ಸ್‌ 2 ವಿಕೆಟ್‌ ಪಡೆದರು.