ಕ್ರೀಡೆಗಳು

ಕನ್ನಡಿಗ, ಟೀಂ ಇಂಡಿಯಾ ಸದಸ್ಯನಿಗೆ ಪೊಲೀಸರಿಂದ ಹೋಟೆಲ್‌ ಎಂಟ್ರಿಗೆ ನಿರಾಕರಣೆ

ಕರ್ನಾಟಕ ಮೂಲದ ಥ್ರೋಡೌನ್ ಸ್ಪೆಷಲಿಸ್ಟ್‌ ರಘು, ಆಟಗಾರರ ಜತೆ ಹೋಟೆಲ್‌ ಒಳಗಡೆ ಹೋಗಲು ಬರುತ್ತಿದ್ದರು. ಈ ವೇಳೆ ಬೇರೆ ಕಾರನಿಂದ ಬಂದ ರಘು ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯವನ್ನಾಡಲು ಈಗಾಗಲೇ ಉಭಯ ತಂಡಗಳ ಆಟಗಾರರು ನಾಗ್ಪುರ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಆದರೆ ಭಾರತದ ಆಟಗಾರರು ಪ್ರಾಕ್ಟೀಸ್‌ ಮುಗಿಸಿ ಹೋಟೆಲ್‌ಗೆ ಬರುವ ವೇಳೆ ತಂಡದ ಸದಸ್ಯರೊಬ್ಬರನ್ನು ಅಭಿಮಾನಿ ಎಂದು ಭಾವಿಸಿ ಪೊಲೀಸರು ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಕರ್ನಾಟಕ ಮೂಲದ ಥ್ರೋಡೌನ್ ಸ್ಪೆಷಲಿಸ್ಟ್‌  ರಘು, ಆಟಗಾರರ ಜತೆ ಹೋಟೆಲ್‌ ಒಳಗಡೆ ಹೋಗಲು ಬರುತ್ತಿದ್ದರು. ಈ ವೇಳೆ ಬೇರೆ ಕಾರನಿಂದ ಬಂದ ರಘು ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ತಾವು ಭಾರತೀಯ ತಂಡದ ಸದಸ್ಯ ಎಂದು ಹೇಳಿದರೂ ಪೊಲೀಸರು ರಘು ಅವರನ್ನು ಒಳಗೆ ಬಿಡಲಿಲ್ಲ. ಸ್ವಲ್ಪ ಗೊಂದಲದ ನಂತರ ತಮ್ಮ ತಪ್ಪು ಅರಿತ ಪೊಲೀಸರು, ರಘು ಅವರನ್ನು ಹೋಟೆಲ್‌ಗೆ ಬಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.