ಮಂಗಳೂರು: ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿದ್ದನ್ನು ಸ್ನೇಹಿತರು ಅವಮಾನಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನಲ್ಲಿ ಈ ಘಟನಲ್ಲಿ ನಡೆದಿದೆ. 21 ವಯಸ್ಸಿನ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಢಿಫರೆಂಟ್ ಸೈಲ್‌ನ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಯುವಕ ಬಂದಿದ್ದ. ಈ ವೇಳೆ ಶಬೀರ್, ಅನೀಶ್ ಪಣಕಜೆ, ಸಲೀಂ ಎಂಬವರು ಸೇರಿ ಆತನನ್ನು ಲೇವಡಿ ಮಾಡಿದ್ದಾರೆ. ಮೂವರು ಸ್ನೇಹಿತರು ಸೇರಿ ಯುವಕ ಎರಡು ಕೈಗಳನ್ನು ಲಾಕ್ ಮಾಡಿ ಪ್ಯಾಂಟ್‌ನ್ನು ಗೋಣಿಚೀಲದ ಡಬ್ಬಳದಿಂದ ಹೊಲಿದು ಅದರ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದರಿಂದ ಮನನೊಂದ ಯುವಕ ಸಂಬಂಧಿಕರ ಮನೆಯಲ್ಲಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.