ವೈರಲ್

ಜಾತಿ ನಿಂದನೆ ಆರೋಪ..ದೇವಾಲಯದ ಅರ್ಚಕ ಅರೆಸ್ಟ್

ದೇವಸ್ಥಾನದ ಹುಂಡಿ ಎತ್ತಿಕೊಂಡು ಹಾಲ್​​ ನಲ್ಲಿ ಇಟ್ಟಿದ್ದಕ್ಕೆ, ಆಕ್ಷೇಪ ವ್ಯಕ್ತಪಡಿಸಿ ಭದ್ರತಾ ಸಿಬ್ಬಂದಿ ಪಾರ್ಥರಾಜುಗೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬೆಟ್ಟದ ರಂಗಸ್ವಾಮಿ ದೇವಸ್ಥಾನದ ಅರ್ಚಕ ರಾಕೇಶ್, ಜಾತಿ ನಿಂದನೆ ಆರೋಪದಡಿ ಬಂಧನವಾಗಿದ್ದಾರೆ. ದೇವಸ್ಥಾನದ ಹುಂಡಿ ಎತ್ತಿಕೊಂಡು ಹಾಲ್ ನಲ್ಲಿ ಇಟ್ಟಿದ್ದಕ್ಕೆ, ಆಕ್ಷೇಪ ವ್ಯಕ್ತಪಡಿಸಿ ಭದ್ರತಾ ಸಿಬ್ಬಂದಿ ಪಾರ್ಥರಾಜುಗೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದಲ್ಲದೇ ಪಾರ್ಥರಾಜುಗೆ ಕೋಲಿನಿಂದ ಹಲ್ಲೆಯನ್ನು ಕೂಡ ಮಾಡಿದ್ದಾರೆ ಎಂಬ ಆರೋಪದಡಿ, ಕುಣಿಗಲ್ ಪೊಲೋಸರಿಂದ ಅರ್ಚಕರ ಬಂಧನವಾಗಿದೆ.