ಧಾರವಾಡದಲ್ಲಿ ಆಟೋ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮೂರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ನಗರದ ಸಂಪಿಗೆ ನಗರದ ಬಸ್ ನಿಲ್ದಾಣ ಬಳಿ ನಡೆದಿದೆ.
ಅಪಘಾತದಲ್ಲಿ ಆಟೋ ಚಾಲಕ ರಮೇಶ ಹಂಚಿನಮನಿ (35), ಮರಿಯವ್ವ ಹಂಚಿನಮನಿ (55) ಮೃತ ದುರ್ದೈವಿಗಳಾಗಿದ್ದಾರೆ. ಕುಟುಂಬ ಸಮೇತ ಯಾವುದೋ ಕಾರ್ಯಕ್ಕೆ ಹೊರಟ್ಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇನ್ನು ಗಾಯಾಳುಗಳನ್ನು ರೇಣುಕಾ ಹಂಚಿನಮನಿ, ಪ್ರಣವ್ ಹಾಗೂ ಪೃಥ್ವಿ ಎಂದು ಗುರುತಿಸಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ಸದ್ಯ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.