ಚಿಕ್ಕಬಳ್ಳಾಪುರ : ರಸ್ತೆಯಲ್ಲಿ ಕಾರಿನ ಟೈರ್ ಸಿಡಿದು ಭೀಕರ ಅಪಘಾತವೊಂದು ಸಂಭವಿಸಿದ್ದು, ಕಾರಿನಲ್ಲಿದ್ದ 6 ಜನ ದುರ್ಮರಣ ಹೊಂದಿದ್ದಾರೆ. ಈ ಘಟನೆ ಜಿಲ್ಲೆಯ ಶಿಂಗನಮಲ ಮಂಡಲ ನಾಯನಪಲ್ಲಿ ಕ್ರಾಸ್ ಬಳಿ ನಡೆದಿದೆ.
ಮೃತ ದುರ್ದೈವಿಗಳು ಸಂತೋಷ್, ಷಣ್ಮುಖ, ವೆಂಕನ್ನ, ಶ್ರೀಧರ್, ಪ್ರಸನ್ನ ಹಾಗೂ ವೆಂಕಿ ಎಂದು ಗುತಿಸಲಾಗಿದೆ. ಕಾರಿನ ಟೈರ್ ಸಿಡಿದು ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಮೃತರೆಲ್ಲ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಎಂದು ತಿಳಿದುಬಂದಿದೆ. ಮೃತರು ಅನಂತಪುರದ ಇಸ್ಕಾನ್ ಸಂಸ್ಥೆಗೆ ಸೇರಿದವರು.