ವಿದೇಶ

ಟ್ರಂಪ್‌ಗೆ ಸೇರಿದ ಹೋಟೆಲ್‌ ಬಳಿ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟ..! ಉಗ್ರ ಕೃತ್ಯ?

ಹೊಸವರ್ಷದ ದಿನವೇ ಅಮೆರಿಕದಲ್ಲಿ ಈ ಘಟನೆ ನಡೆದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಹೊತ್ತಿ ಉರಿದ ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದು 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಯುಎಸ್ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್‌ಗೆ ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟಗೊಂಡು, ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಹೊಸವರ್ಷದ ದಿನವೇ ಅಮೆರಿಕದಲ್ಲಿ ಈ ಘಟನೆ ನಡೆದಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಹೊತ್ತಿ ಉರಿದ ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದು 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಟ್ರಂಕ್‌ ಸ್ಫೋಟವು ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಎಫ್‌ಬಿಐ ತಿಳಿಸಿದೆ. ಇದಲ್ಲದೆ ಮತ್ತೊಂದೆಡೆ ನ್ಯೂ ಓರ್ಲಿಯನ್ಸ್‌ನಲ್ಲಿ ನ್ಯೂ ಇಯರ್‌ ಸೆಲೆಬ್ರೇಷನ್‌ ವೇಳೆ ವ್ಯಕ್ತಿಯೊಬ್ಬ ಟ್ರಕ್ ಚಲಾಯಿಸಿ, 15 ಜನರನ್ನು ಕೊಂದಿದ್ದಾನೆ. ಹೀಗಾಗಿ 2 ಪ್ರಕರಣಕ್ಕೂ ಏನಾದ್ರೂ ಸಂಬಂಧವಿದೆಯಾ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.