ಕರ್ನಾಟಕ

ಕದ್ದ ಬೈಕ್‌ನಲ್ಲಿ ಮನೆಗಳ್ಳತನ ಮಡುತ್ತಿದ್ದ ಆರೋಪಿಗಳು ಅಂದರ್

ಬೆಂಗಳೂರಿನ‌ ಅಂಧ್ರಹಳ್ಳಿ ನಿವಾಸಿಗಳಾಗಿರೋ‌ ಗೋಲ್ಡ್ ವೆಂಕಿ & ವೆಂಕಟೇಶ್, ಶ್ರೀನಿವಾಸ & ಕರಾಟೆ ಸೀನ, ಸಾಗರ್ ಎಂಬ ಮೂವರು ಆರೋಪಿಗಳು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಕರಾಟೆ ಸೀನನ ಮೇಲೆ 44 ಕೇಸ್ ಗಳು ದಾಖಲಾಗಿದ್ದರೆ, ವೆಂಕಟೆಶ್ ಮೇಲೆ 8 ಕೇಸ್ ಇದೆ.

ಬೆಂಗಳೂರು : ಬಾಗಲಗುಂಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕದ್ದ ಬೈಕ್‌ನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. 

ಬೆಂಗಳೂರಿನ‌ ಅಂಧ್ರಹಳ್ಳಿ ನಿವಾಸಿಗಳಾಗಿರೋ‌  ಗೋಲ್ಡ್ ವೆಂಕಿ & ವೆಂಕಟೇಶ್, ಶ್ರೀನಿವಾಸ & ಕರಾಟೆ ಸೀನ, ಸಾಗರ್ ಎಂಬ ಮೂವರು ಆರೋಪಿಗಳು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಕರಾಟೆ ಸೀನನ ಮೇಲೆ 44 ಕೇಸ್ ಗಳು ದಾಖಲಾಗಿದ್ದರೆ, ವೆಂಕಟೆಶ್ ಮೇಲೆ 8 ಕೇಸ್ ಇದೆ. ಆರೋಪಿ ಸಾಗರ್ ಎಂಬಾತ ವೆಂಕಟೇಶ್ ಸ್ನೇಹಿತನಾಗಿದ್ದ. ಜೈಲಿಗೆ ಹೋದಾಗ ವೆಂಕಟೇಶ್ ಮತ್ತು ಕರಾಟೆ ಸೀನ ಪರಿಚಯ ಆಗಿದೆ. ಬಳಿಕ ಸಾಗರ್ ಮಾತು ಕೇಳಿ ಮೂವರು ಬೈಕ್ ಕಳ್ಳತ‌‌ನಕ್ಕಿಳಿದಿದ್ರು.  ಹಿಂದೆ ಮನೆಗಳ್ಳತನ ಮಾಡ್ತಿದ್ದ ಸೀನ ಮತ್ತು ವೆಂಕಟೇಶ್ ಎಂಬುವವರು ಸಾಗರ್ ಮಾತು ಕೇಳಿ ಬೈಕ್ ಕಳ್ಳತನ ಮಾಡುತ್ತಿದ್ದರು. ಬಳಿಕ‌ ಕದ್ದ ಬೈಕ್‌‌ನಲ್ಲೇ ಆರೋಪಿಗಳು ಮನೆಗಳ್ಳತನ ಮಾಡುತ್ತಿದ್ದರು. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರೋಭಿಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ 76 ಗ್ರಾಂ. ಚಿನ್ನಾಭರಣ, 16 ಬೈಕ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.