ದೇಶ

ಕೋಟ್ಯಂತರ ರೂ. ಆಸ್ತಿ ಬಿಟ್ಟು ಸನ್ಯಾಸಿಯಾದ ನಟಿ

ಮಮತಾ ಕುಲಕರ್ಣಿ ಅವರು ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ರುದ್ರಾಕ್ಷಿ ಹಾರ, ಹಣೆಗೆ ವಿಭೂತಿ, ಭುಜಕ್ಕೆ ಖಾವಿ ಚೀಲ ನೇತು ಹಾಕಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭಮೇಲೆ ಹತ್ತು-ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಈ ಬಾರಿ ಅಂತು ಸೋಷಿಯಲ್‌ ಮೀಡಿಯಾದಿಂದಾಗಿ ಮಹಾಕುಂಭಮೇಳಕ್ಕೆ ದೊಡ್ಡಮಟ್ಟದ ಪ್ರಚಾರವೇ ಸಿಕ್ಕಿದೆ. ಸಾಧು-ಸಂತರು, ಅಘೋರಿಗಳು, ನಾಗಸಾಧುಗಳ ದಂಡೇ ಹರಿದು ಬಂದಿದೆ. ಅದರಲ್ಲಿಯೂ ಲಕ್ಷಾಂತರ ರೂಪಾಯಿ ಸಂಬಳ ಬಿಟ್ಟು, ಸನ್ಯಾಸ ಜೀವನದ ಹಾದಿ ತುಳಿದಿರುವ ಐಐಟಿ ಬಾಬಾ, ಸರ ಮಾರಾಟ ಮಾಡುವ ಮೊನಾಲಿಸ ಎಲ್ಲರ ಆಕರ್ಷಣೆ ಆಗಿದ್ದಾರೆ.. ಈ ನಡುವೆ ಮತ್ತೊಬ್ಬ ನಟಿ ತನ್ನ ಸನ್ಯಾಸ ಜೀವನದಿಂದ ಎಲ್ಲರ ಅಟ್ರಾಕ್ಷನ್‌ ಆಗಿರೋದು ಸುಳ್ಳಲ್ಲ. ಅವರು ಮತ್ಯಾರು. ಅವರೇ ಮಮತಾ ಕುಲಕರ್ಣಿ. ಬಾಲಿವುಡ್‌ ಹಾಗೂ ಸೌತ್‌ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಮಮತಾ ಕುಲಕರ್ಣಿ ಇದೀಗ ಲೌಕಿಕ ಬದುಕು ತೊರೆದು ಆಧ್ಯಾತ್ಮದತ್ತ ವಾಲಿದ್ದಾರೆ.

90ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ, ಈಗ ನಾಗಾಸಾದ್ವಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮಂಗಳಮುಖಿಯರೇ ಇರುವ ಕಿನ್ನರ ಅಖಾಡದಲ್ಲಿ ಈ ದೀಕ್ಷೆ ಸ್ವೀಕರಿಸುವ ಮೂಲಕ ಮಹಾಮಂಡಲೇಶ್ವರಿಯಾಗಿ ಬದಲಾಗಿದ್ದಾರೆ.

ಮಾಡೆಲಿಂಗ್ ಮೂಲಕ ಸಿನೆಮಾ ಇಂಡಸ್ಟ್ರಿ ಪ್ರವೇಶಿಸಿದ ಮಮತಾ ಕುಲಕರ್ಣಿ, 10ಕ್ಕೂ ಹೆಚ್ಚು ಹಿಟ್ ಸಿನೆಮಾ ನೀಡಿದ್ದಾರೆ. ಅಕ್ಷಯ್ ಕುಮಾರ್, ಗೋವಿಂದ್, ಅಮಿರ್ ಖಾನ್ ಸೇರಿ ಹಲವು ನಾಯಕರ ಜೊತೆ ನಟಿಸಿದ್ದಾರೆ.. ಅಂದಿನ ಕಾಲದಲ್ಲೇ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡುತ್ತಿದ್ದ ಮಮತಾ ಕುಲಕರ್ಣಿ, ಬಾಲಿವುಡ್‌ನಲ್ಲಿ ಹಾಟ್‌ ನಟಿ ಎಂದೇ ಗುರುತಿಸಿಕೊಂಡಿದ್ದರು.. 52ರ ವರ್ಷ ಪ್ರಾಯದ ನಟಿ ಮಮತಾ ಕುಲಕರ್ಣಿ,  2002ರಲ್ಲಿ ಬಿಡುಗಡೆಯಾದ ಕಭಿ ತುಮ್ ಕಭಿ ಹಮ್ ಅವರು ನಟಿಸಿದ ಕೊನೆಯ ಬಾಲಿವುಡ್‌ ಚಿತ್ರ.

ಕೇವಲ ಬಾಲಿವುಡ್‌ಗೆ ಮಾತ್ರವಲ್ಲ. ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್‌ ಜೊತೆ ವಿಷ್ಣು, ವಿಜಯ ಚಿತ್ರದಲ್ಲಿ ನಟಿಸಿ ಪಡೆ ಹುಡುಗರ ನಿದ್ದೆ ಕದ್ದಿದ್ದಳು ಮಮತಾ ಕುಲಕರ್ಣಿ. ಒಂದು ಕಾಲದಲ್ಲಿ ಟಾಪ್‌ಲೆಸ್ ಫೋಟೋಗಳು ಮತ್ತು ಡ್ರಗ್ ಕೇಸ್ ಮೂಲಕ ಸಂಚಲನ ಮೂಡಿಸಿದ್ದ ಈ ನಟಿ ಈಗ ಸನ್ಯಾಸಿನಿ. ಮಹಾದೇವನ ಜಯಘೋಷದೊಂದಿಗೆ ಕಿನ್ನರ ಅಖಾಡದಲ್ಲಿ ಧಾರ್ಮಿಕ ಧ್ವಜದ ಅಡಿಯಲ್ಲಿ ಪಟ್ಟಾಭಿಷೇಕ ನೇರವೇರಿದೆ.

ಮಮತಾ ಕುಲಕರ್ಣಿ ಅವರು ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ರುದ್ರಾಕ್ಷಿ ಹಾರ, ಹಣೆಗೆ ವಿಭೂತಿ, ಭುಜಕ್ಕೆ ಖಾವಿ ಚೀಲ ನೇತು ಹಾಕಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮೂಲಗಳ ಪ್ರಕಾರ ಮಮತಾ ಕುಲಕರ್ಣಿ ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿ.. ಹೀಗಿದ್ರೂ ಲೌಕಿಕ ಬದುಕಿನಿಂದ ದೂರವಾಗಿದ್ದಾರೆ.. ಐಷಾರಾಮಿ ಜೀವನವಿದ್ರೂ ಆಧ್ಯಾತ್ಮದತ್ತ ಹೆಜ್ಜೆ ಹಾಕಿದ್ದಾರೆ.. ಕಲರ್‌ಫುಲ್‌ ಸಿನಿಮಾ ಜಗತ್ತನ್ನೂ ತೊರೆದು ಇದೀಗ ಸಾಧ್ವಿಯಾಗಿದ್ದಾರೆ..