ಶಿವಮೊಗ್ಗ (ಸೆ.5): ಮನೆಯಲ್ಲಿ ಆಟವಾಡುವ ವೇಳೆ ಜ್ಯೂಸ್ ಬಾಟಲ್ ನುಂಗಿದ್ದ ಮಗು ದಾರುಣ ಸಾವು ಕಂಡ ಘಟನೆ ಶಿಕಾರಿಪುರ ತಾಲೂಕಿನ ಹಗುರವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಒಂದುವರೆ ವರ್ಷದ ಮಗು ಜ್ಯೂಸ್ ಬಾಟಲಿ ಹಿಡಿದುಕೊಂಡು ಅಟವಾಡುತ್ತಿದ್ದ ವೇಳೆ ಜ್ಯೂಸ್‌ನ ಬಾಟಲಿಯ ಮುಚ್ಚಳವನ್ನು ನುಂಗಿದೆ.
ಇದು ಮನೆಯಲ್ಲಿದ್ದ ಯಾರಿಗೂ ಗೊತ್ತಾಗಿಲ್ಲ.ನಂತರ ಮಗುವಿಗೆ ಉಸಿರುಗಟ್ಟಿದ ಅನುಭವವಾಗುತ್ತಿದ್ದಂತೆ ಇದು ಅರಿವಿಗೆ ಬಂದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಪ್ರಯತ್ನ ಫಲಕೊಟ್ಟಿಲ್ಲ, ಮಗು ಸಾವನ್ನಪ್ಪಿದೆ. ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.