ಬಿಟ್ ಕಾಯಿನ್ ಪ್ರಕರಣ ಸಂಬಂಧ ಮಹಮ್ಮದ್ ನಲಪಾಡ್ ಪ್ರತಿಕ್ರಿಯೆ ನೀಡಿದ್ದು, ನನಗೆ ಈ ಕೇಸ್ ಬಗ್ಗೆ ಯಾವುದೇ ಭಯ ಇಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ನಾಳೆ ವಿಚಾರಣೆಗೆ ಹಾಜರಾಗುವುದಕ್ಕೆ ನೋಟಿಸ್ ನೀಡಿದ್ರು. ಆದರೆ ನನಗೆ ನಾಳೆ ಬೇರೆ ಪರ್ಸನಲ್ ಕೆಲಸಗಳಿವೆ. ನಾನು ಎಲ್ಲೂ ಓಡಿ ಹೋಗೋದಿಲ್ಲ..ಶ್ರೀಕಿ ನನಗೆ ಪರಿಚಯ ಇದಾನಾ ಇಲ್ವಾ ಅಂತಾ ಕೇಳಿದ್ರು. ಹೇಳಿಕೆ ದಾಖಲು ಮಾಡಿ ಬಂದಿದೀನಿ. ನನ್ನ ತಮ್ಮನ ಮೂಲಕ ಶ್ರೀಕಿ ನನಗೆ ಪರಿಚಯ. ಆದ್ರೆ ಈ ಕೇಸ್ ಗೂ.. ನನಗೂ.. ನನ್ನ ತಮ್ಮನಿಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಅವನಿಂದ ನನ್ನ ಅಕೌಂಟ್‌ಗಾಗಲೀ, ನನ್ನ ತಮ್ಮನ ಅಕೌಂಟ್‌ಗಾಗಲಿ ಒಂದು ರೂಪಾಯಿ ಹಣ ಬಂದಿಲ್ಲ. ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ. ನನಗೆ ಕಾನೂನಿನ ಮೇಲೆ ಗೌರವ ಇದೆ ಎಂದು ಹೇಳಿದ್ದಾರೆ.