ದೆಹಲಿಯ ಬವಾನಾ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಫೈಲ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರಿ ಅಗ್ನಿಅವಘಡದಲ್ಲಿ ಇಡೀ ಕಟ್ಟಡವೇ ಹೊತ್ತಿ ಉರಿಯುತ್ತಿದೆ. ದಟ್ಟವಾದ ಹೊಗೆ ಆವರಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಕಿ ನಂದಿಸಲು 16 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸೋದು ಸವಾಲಾಗಿದೆ. ಕಾರ್ಖಾನೆಯಲ್ಲಿ ಎಷ್ಟು ಜನ ಇದ್ದರು? ಅಗ್ನಿ ಅವಘಡಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬರಬೇಕಿದೆ.