ಬೆಂಗಳೂರು - ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 21 ರಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕಠಿಣ ಕ್ರಮವನ್ನ ಕೈಗೊಳ್ಳಲಿದೆ. ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ.
ಪರೋಕ್ಷವಾಗಿಯೂ ಉತ್ತೇಜನ ನೀಡಿದ್ದರೆ ತಪ್ಪದೇ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂದ ಮಾತನಾಡಿರು ಇಲಾಖಾ ಸಚಿವರಾದ ಮಧು ಬಂಗಾರಪ್ಪ , ಅಕ್ರಮಗಳಿಗೆ ತಡೆ ಹಾಕಲು ಈ ಹೊಸ ನಿರ್ಧಾರ ಕೈಗೊಳ್ಳಲಾಗಿದೆ. ಮುನ್ನಚ್ಚರಿಕೆಯೂ ಕ್ರಮವೂ ಇದಾಗಿದೆ.
ಈ ಹಿಂದೆ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದವರನ್ನು ಸದ್ಯ ಬಂಧನಕ್ಕೆ ಒಳಪಡಿಸಲಾಗಿದೆ. ಕಾರಣ ಪರೀಕ್ಷಾ ಅಕ್ರಮ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 2೦೦ ಕಿಲೋ ಮೀಟರ್ ಅಂತರದಲ್ಲಿ ಜೆರಾಕ್ಸ್ , ಟ್ಯೂಷನ್ , ಸೈಬರ್ , ಕಂಪ್ಯೂಟರ್ ಗೇಮ್ ಸೆಂಟರ್‌ಗಳ ಮೇಲೂ ನಿಗಾ ಇಡಲು ನಿರ್ಧಾರವಾಗಿದೆ ಎಂದು ಸಚಿವರಾದ ಮಧು ಬಂಗಾರಪ್ಪ ಹೇಳಿದರು.