ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮನಸ್ಸಿಗೆ ತುಂಬಾ ಮಜಾ ನೀಡುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇಲ್ಲೊಬ್ಬ ರೈತ ಹೊಲದಲ್ಲಿ ಕೆಲಸ ಮಾಡಿ ದಣಿದು ಬಂದರೂ ಕೂಡಾ ಸುಸ್ತಾಗಿ ಕೂರದೆ, ಮನಸ್ಸನ್ನು ಸಂತೋಷಪಡಿಸುವುದು ತುಂಬಾ ಮುಖ್ಯ ಎನ್ನುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಕ್ರಿಕೆಟ್ ಆಡಿದ್ದಾರೆ. ಈ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಹೌದು, ಕ್ರಿಕೆಟ್ ಆಟವು ಎಲ್ಲರ ನೆಚ್ಚಿನ ಕ್ರೀಡೆ. ಅದರಲ್ಲೂ ನಮ್ಮ ದೇಶದಲ್ಲಿ ಎಲ್ಲಾ ವಯೋಮಾನದವರು ಕೂಡಾ ಈ ಆಟವನ್ನು ಆಡುತ್ತಾರೆ. ಹುಡುಗರಂತೂ ಸಂಜೆ ಕೆಲಸ ಬಿಟ್ಟು ಬಂದು ಅಥವಾ ಶಾಲೆ ಬಿಟ್ಟ ಬಳಿಕ ಗಲ್ಲಿ ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ರೈತ ಕೂಡ ಹುಡುಗರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ, ಹೊಲದಲ್ಲಿ ಕೆಲಸ ಮಾಡಿ ದಣಿದು ಬಂದಿದ್ದರೂ ಕೂಡಾ, ಕ್ರಿಕೆಟ್ ಆಡಿದ್ದಾರೆ. ಅನ್ನದಾತನ ಕ್ರಿಕೆಟ್ ಆಟಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.