ವೈರಲ್

ಹೆಚ್ ಡಿ ಕೋಟೆಯಲ್ಲಿ ಬೋನಿಗೆ ಬಿದ್ದ ಐದನೇ ಚಿರತೆ..!

ಸುಮಾರು 1 ವರ್ಷದಿಂದ ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬೋನು ಇರಿಸಿ ಕಾರ್ಯಾಚರಣೆ ನಡೆಸಿದ್ದು, ಈಗ ಗಂಡು ಚಿರತೆ ಬೋನಿಗೆ ಬಿದ್ದಿದೆ.

ಮೈಸೂರು : ಒಂದು ತಿಂಗಳ ಒಳಗೆ ಒಂದೇ ಸ್ಥಳದಲ್ಲಿ ಐದನೇ ಚಿರತೆ ಬೋನಿಗೆ ಬಿದಿದ್ದು, ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಹೆಚ್ ಡಿ ಕೋಟೆ ತಾಲ್ಲೂಕಿನ ಹೌಸಿಂಗ್ ಬೋರ್ಡ್ ಬಳಿ ಚಿರತೆ ಸೆರೆಯಾಗಿದೆ. ಮಾಜಿ ಶಾಸಕ ದಿ. ಎನ್. ನಾಗರಾಜು ಅವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ.

ಸುಮಾರು 1 ವರ್ಷದಿಂದ ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬೋನು ಇರಿಸಿ ಕಾರ್ಯಾಚರಣೆ ನಡೆಸಿದ್ದು, ಈಗ ಗಂಡು ಚಿರತೆ ಬೋನಿಗೆ ಬಿದ್ದಿದೆ. ಕೆಲ ದಿನಗಳ ಹಿಂದೆ ಹುಲಿ ಸಹಾ ಕಾಣಿಸಿಕೊಂಡಿತ್ತು. ಸೆರೆ ಸಿಕ್ಕ ಚಿರತೆ ನೋಡಲು ಜನರು ಮುಗಿ ಬಿದ್ದಿದ್ದಾರೆ.ಜನ ನೋಡಿ ಚಿರತೆ ಆರ್ಭಟ ಆಕ್ರೋಶಗೊಂಡಿದ್ದು, ಬೋನಿನ‌ ಒಳಗಿನಿಂದಲೇ ಜನರ ಮೇಲೆ ದಾಳಿಗೆ ಯತ್ನ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನಿಡಿದ್ದಾರೆ.

ಸೆರೆ ಸಿಕ್ಕ ಚಿರತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದು, ಸೆರೆ ಸಿಕ್ಕ ಎಲ್ಲಾ ಚಿರತೆಗಳು ಆರರಿಂದ ಏಳು ವರ್ಷ ಪ್ರಾಯದ ಗಂಡು ಚಿರತೆಗಳೇ ಆಗಿವೆ. ಇನ್ನೂ ಚಿರತೆಗಳಿರುವ ಶಂಕೆಯನ್ನ ರೈತರು ವ್ಯಕ್ತಪಡಿಸಿದ್ದಾರೆ. ಮತ್ತೆ ಬೋನು ಇಡಲು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒತ್ತಾಯಿಸಿದ್ದಾರೆ.