ಕರ್ನಾಟಕ

ಅಕ್ರಮ ವಲಸಿಗರ ಹೋರಾಟ ಪೂರ್ವ ನಿರ್ಧಾರದಂತೆ ಚರ್ಚೆ ಫಿಕ್ಸ್‌ !

ಅಕ್ರಮ ನುಸುಳುಕೋರರು ಕರ್ನಾಟಕದಲ್ಲಿ 40 ಲಕ್ಷ ಜನ ಇದ್ದಾರೆ‌. ಹಲವು ಜಾಗದಲ್ಲಿ ಅಕ್ರಮ ವಲಸಿಗರು ಶ್ರಿಲಂಕಾ,ಪಾಕಿಸ್ತಾನ ಸೇರಿ ಹಲವು ಕಡೆಯಿಂದ ಬಂದಿದ್ದಾರೆ.

ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನಲ್ಲಿಂದು ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈ ವೇಳೆ ,ಅಕ್ರಮ ವಲಸಿಗರ ಹೋರಾಟ ವಿಚಾರವಾಗಿ  ಪೂರ್ವ ನಿರ್ಧಾರದಂತೆ 20ರಂದು ಸೇರಿ ಚರ್ಚೆ ಮಾಡಿದ್ದೆವೆ. ವಕ್ಫ್ ಬಗ್ಗೆ ಚರ್ಚೆ ಮಾಡಿ ರೈತರು, ಸಂಘ ಸಂಸ್ಥೆಗಳ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು. ಹಿರಿಯ ಮುಖಂಡರು,ಶಾಸಕರು ಮಿತ್ರರೂ ಸೇರಿದ್ದರು. ರಾಜಕೀಯ, ಕರ್ನಾಟಕ ಸೇರಿ ಹಲವು ವಿಚಾರ ಚರ್ಚೆಯಾಗಿದೆ. ವಕ್ಪ್ ಪೂರ್ಣ ಪ್ರಮಾಣದಲ್ಲಿ ಆಗಬೇಕು ಎಂದು ಚರ್ಚೆಯಾಗಿದೆ. ಜೆಪಿಸಿ ವರದಿ ಮಂಡನೆಯಾಗಿದ್ದು, ಬಿಲ್ ಪಾಸಾಗಬೇಕಿದೆ. ದೊಡ್ಡ ಆಸ್ತಿಯನ್ನು ಜನರಿಗೆ ತಲುಪಿಸುತ್ತೆ ಎಂದುಕೊಂಡಿದ್ದೆವೆ. ಹಾಗೇ ಅಕ್ರಮ ನುಸುಳುಕೋರರು ಕರ್ನಾಟಕದಲ್ಲಿ 40 ಲಕ್ಷ ಜನ ಇದ್ದಾರೆ‌. ಹಲವು ಜಾಗದಲ್ಲಿ ಅಕ್ರಮ ವಲಸಿಗರು ಶ್ರಿಲಂಕಾ,ಪಾಕಿಸ್ತಾನ ಸೇರಿ ಹಲವು ಕಡೆಯಿಂದ ಬಂದಿದ್ದಾರೆ. ಇವರು ನಮ್ಮ ರಾಜ್ಯದ ಸಮಸ್ಯೆಯನ್ನು ಹೆಚ್ಚಳ ಮಾಡಿದ್ದಾರೆ. ಈಗಾಗಲೇ ಅಮೇರಿಕಾ ಸೇರಿ ಹಲವು ದೇಶ ನಮ್ಮದೇ ನಿರ್ಧಾರ ತಗೆದುಕೊಂಡಿದ್ದಾರೆ. ಈ ಬಗ್ಗೆ ನಾನು ಪ್ರಾಥಮಿಕ ಅಧ್ಯಯನ ಶುರು ಮಾಡಿದ್ದಿನಿ. ಹಲವು ತಜ್ಞರ ಜೊತೆ ಮಾತಾಡಿದ್ದೆನೆ. ವೋಟ್ ಬ್ಯಾಂಕ್ ಗೆ ಇವರಿಗೆ ಆಶ್ರಯ ನೀಡಲಾಗುತ್ತಿದೆ. 

ಸ್ಲಿಪರ್ ಸೆಲ್ ಗಳು ಕೆಲಸ ಮಾಡ್ತಿದೆ. ಅಕ್ರಮ ಅಧಾರ್ ಕಾರ್ಡ್ ಪಡೆದು ನಮ್ಮೊಳಗೆ ಇದ್ದಾರೆ. ಕೇಂದ್ರ ಇದಕ್ಕೆ ಕಠಿಣ ಕ್ರಮ ತಗೆದುಕೊಳ್ಳಬೇಕು. ಹಾಗೆ ಒಂದು ದೇಶ ಒಂದು ಚುನಾವಣೆ ಸೇರಿ ಹಲವು ವಿಚಾರವನ್ನು ಗಂಬೀರವಾಗಿ ತಗೆದುಕೊಳ್ಳಲಾಗಿದೆ. ರಾಜ್ಯದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. 176 ಜನ ಇದ್ದಾರೆ ಅಂತ ಸದನಕ್ಕೆ ಮಾಹಿತಿ ಕೊಟ್ಟಿದ್ದಾರೆ. ಸುಳ್ಳು ಮಾಹಿತಿ ನೀಡಿದ್ದಾರೆ‌‌. ಕೆ ಆರ್ ಪುರದಲ್ಲಿ ಅವರು ಇಲ್ಲಿ ಬಂದು ವೋಟರ್ ಆಗಿ ಕಾರ್ಪೋರೇಟರ್ ಚುನಾವಣೆ ಗೆ ನಿಲ್ಲಲ್ಲು ಸಿದ್ದ ಆಗ್ತಿದ್ದಾರೆ. ಇದನ್ನ ತಡೆಯಲು ನಾವು ಹೋರಾಟ ಮಾಡುತ್ತೆವೆ. ಪ್ಯಾಲೆಸ್ಟೈನ್ ಸೇರಿ ಎಲ್ಲೆಲ್ಲಾ ಎನ್ ಆಗ್ತಿದೆ ಅಂತ ಎಲ್ಲರಿಗೆ ಗೊತ್ತಿದೆ. ಡ್ರಗ್ ಮಾಪಿಯಾ,ಬಾಂಬ್ ಬ್ಲಾಸ್ಟ್ ಎಲ್ಲವೂ ಜಾಸ್ತಿಯಾಗ್ತಿದೆ. ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ ಎಂದು ಕುಮಾರ ಬಂಗಾರಪ್ಪ ಹೇಳಿದರು.