ಕರ್ನಾಟಕ

ತ್ಯಾಜಕ್ಕೆ ಹೊತ್ತಿಸಿದ್ದ ಬೆಂಕಿ ಲಾರಿಗೆ ವ್ಯಾಪಿಸಿ ಅವಘಡ..!

ಗುಜುರಿ ವಸ್ತುಗಳು ತುಂಬಿದ್ದ ಲಾರಿಗೆ ಬೆಂಕಿ ವ್ಯಾಪಿಸಿ ಲಾರಿಯೊಂದು ಹೊತ್ತಿ ಉರಿದಿರುವ ಘಟನೆ, ಹಾಸನದಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿದ್ದ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದು ಭಾರಿ ಅನಾಹುತ ಸಂಭವಿಸಿದೆ. ಗುಜುರಿ ವಸ್ತುಗಳು ತುಂಬಿದ್ದ ಲಾರಿಗೆ ಬೆಂಕಿ ವ್ಯಾಪಿಸಿ ಲಾರಿಯೊಂದು ಹೊತ್ತಿ ಉರಿದಿರುವ ಘಟನೆ, ಹಾಸನದಲ್ಲಿ ನಡೆದಿದೆ. ಈ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಾರಿಯಲ್ಲಿದ್ದ ವಸ್ತುಗಳು ಸಂಪೂರ್ಣ  ಬೆಂಕಿಗಾಹುತಿಯಾಗಿವೆ.

ಬೆಂಕಿ ಹೊತ್ತಿಕೊಂಡ ನಂತರ ಲಾರಿಯ ಡೀಸೆಲ್ ಟ್ಯಾಂಕರ್ ಸ್ಫೋಟಗೊಂಡಿದೆ. ಈ ವೇಳೆ ಅಲ್ಲಿನ ಸುತ್ತಮುತ್ತಲಿನವರು ಕಸಕ್ಕೆ ಹಾಕಿದ್ದ ಬೆಂಕಿ ಲಾರಿಗೆ ವ್ಯಾಪಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ, ಲಾರಿ ಸಂಪೂರ್ಣ ಹೊತ್ತಿ ಉರಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.