ಸುದೀರ್ಘ 156 ದಿನಗಳ ಕಾಲ ಗರಿಷ್ಠ ಮಟ್ಟದಲ್ಲಿ ನೀರು ಕಾಯ್ದುಕೊಂಡಿರುವ ಕನ್ನಂಬಾಡಿ ಕಟ್ಟೆ, ದಾಖಲೆ ನಿರ್ಮಿಸಿದೆ. ಕೆಆರ್‌ಎಸ್ ಡ್ಯಾಂ ನಿರ್ಮಾಣದ ಬಳಿಕ, ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಂಬಾಡಿ ಕಟ್ಟೆಯಲ್ಲಿ ಇಂದಿಗೂ 124 ಅಡಿ ನೀರು ತುಂಬಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 124.30 ಅಡಿ ಭರ್ತಿಯಾಗಿದೆ. 49.452 ಟಿಎಂ ಗರಿಷ್ಠ ಸಾಂದ್ರತೆಯ KRSನಲ್ಲಿ ಸದ್ಯ 48.754 ಟಿಎಂಸಿ ನೀರು ತುಂಬಿದೆ.
ಈ ಮೂಲಕ ಎದುರಾಳಿಗಳು ಹಾಗೂ ಟೀಕಾಕಾರರಿಗೆ ಸಚಿವ ಎನ್.ಚಲುವರಾಯಸ್ವಾಮಿ ಟಕ್ಕರ್ ಕೊಟ್ಟಿದ್ದಾರೆ. ಕಾಂಗ್ರೆಸ್ ಬಂದ್ರೆ ಮಳೆ ಬರಲ್ಲಾ ಅನ್ನೋರಿಗೆ ಇದೀಗ ತಿರುಗೇಟು ನೀಡಿದಂತಾಗಿದೆ. KRS ಡ್ಯಾಂ ಕಟ್ಟಿದಾಗಿನಿಂದ ಈ ವರ್ಷ ದಾಖಲೆ ನಿರ್ಮಾಣವಾಗಿದೆ.