ಬೆಳಗಾವಿ : ಆತ್ಮಹತ್ಯೆಗೆಂದು ಕೃಷ್ಣಾ ನದಿಯಲ್ಲಿ ಜಿಗಿದ ಮಹಿಳೆಯನ್ನ ಯುವಕನೊಬ್ಬ ರಕ್ಷಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬ್ಯಾರೇಜ್ ಮೇಲೆ ಕೌಟುಂಬಿಕ ಕಲಹ ಹಿನ್ನೆಲೆ, ಕೃಷ್ಣಾ ನದಿಗೆ ಹಾರಿ ಮಹಿಳೆ ವೀನಾಕ್ಷಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ರು. ಮಹಿಳೆ ನದಿಗೆ ಜಿಗಿಯುತ್ತಿದ್ದಂತೆ ಯುವಕ ಪ್ರಶಾಂತ್ ಗಸ್ತಿ ಕೂಡ ನದಿಗೆ ಹಾರಿ ಮಹಿಳೆಯ ಪ್ರಾಣವನ್ನ ರಕ್ಷಿಸಿದ್ದಾನೆ.
ಯುವಕ ನದಿಗೆ ಹಾರುತ್ತಿದಂತೆ ಸ್ಥಳಕ್ಕೆ ಸ್ಥಳೀಯರು ಕೂಡ ಸಹಾಯಕ್ಕೆ ದಾವಿಸಿದ್ದಾರೆ. ಬಳಿಕ ಹಗ್ಗ ಕಟ್ಟಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಪ್ರಶಾಂತ್ ಎಂಬ ಯುವಕನಿಂದ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.