ತುಮಕೂರು: ತುಮಕೂರು ಜಿಲ್ಲೆಯ ತಿಪಟೂರಿನ ಮರಿಸಿದ್ದಯ್ಯನ ಪಾಳ್ಯದ ಬಳಿ ಕಿಡಿಗೇಡಿಗಳು ಶಾಲಾ ಶಿಕ್ಷಕಿಯನ್ನು ಅಡ್ಡಗಟ್ಟಿ ಸರಗಳ್ಳತನ ಮಾಡಿದ್ದಾರೆ. ಶಿಕ್ಷಕಿಯು ಕನಕದಾಸರ ಜಯಂತಿ ಮುಗಿಸಿ ಹಿಂದಿರುಗುವಾಗ ಶಿಕ್ಷಕಿಯ ದ್ವಿಚಕ್ರವಾಹನ ಅಡ್ಡಗಟ್ಟಿ ರಸ್ತೆಯಲ್ಲಿ ಕೃತ್ಯ ನಡೆಸಿದ್ದಾರೆ. ಮರಿಸಿದ್ದಯ್ಯನ ಪಾಳ್ಯದ ಪ್ರಾಥಮಿಕ ಶಾಲಾ ಶಿಕ್ಷಕಿ ರೇಖಾ ಎಂಬುವವರ 40 ಹಾಗೂ 20 ಗ್ರಾಂ ತೂಕದ 2 ಸರ ಕಸಿದು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ.
ಇನ್ನು ಸರ ಕಸಿದು ಪರಾರಿಯಾಗುವ ವೇಳೆ ಬುಲೆಟ್ ವಿಡಿಯೋ ಮಾಡಿಕೊಳ್ಳಲು ಶಿಕ್ಷಕಿ ಮುಂದಾಗಿದ್ದಳು. ಆದ್ರೆ ಶಿಕ್ಷಕಿ ರೇಖಾಳ ಮೊಬೈಲ್ ಕಿತ್ತುಕೊಂಡು ಕಳ್ಳರು ಎಸ್ಕೇಪ್ ಆಗಿದ್ದು, ಶಿಕ್ಷಕಿ ಗಾಯಗೊಂಡಿದ್ರು. ಇನ್ನು ಈ ಬಗ್ಗೆ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕಿ ರೇಖಾರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.