ಕರ್ನಾಟಕ

ಬಹು ನಿರೀಕ್ಷಿತ ಕಪಟಿ ಚಿತ್ರ ಮಾರ್ಚ್ 7 ರಂದು ರಿಲೀಸ್

ಡಾರ್ಕ್ ವೆಬ್ ಹಾರರ್ ಮೀಟ್ಸ್ ಸೈಕಲಾಜಿಕಲ್ ಥ್ರಿಲ್ಲರ್ - ಸೈಬರ್ ಕ್ರೈಮ್, ಮಿಸ್ಟರಿ ಮತ್ತು ವಿಲಕ್ಷಣ ಸಸ್ಪೆನ್ಸ್‌ನ ಸಂಗಮವಾಗಿದೆ ಈ ಚಿತ್ರ. ಸುಕೃತಾ ವಾಗ್ಲೆ, ದೇವ್ ದೇವಯ್ಯ ಮತ್ತು ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಹು ನಿರೀಕ್ಷಿತ ಸೈಕಲಾಜಿಕಲ್ ಥ್ರಿಲ್ಲರ್ "ಕಪಟಿ" ಚಿತ್ರ ಮಾರ್ಚ್ 7 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಫೆಬ್ರವರಿ 27 ರಂದು ಟ್ರೇಲರ್ ಲಾಂಚ್ ಆಗಲಿದೆ.  ರವಿಕಿರಣ್ ಮತ್ತು ಚೇತನ್ ಎಸ್ ಪಿ ಚಿತ್ರ ನಿರ್ದೇಶಿಸಿದ್ದಾರೆ.

ಹೆಸರಾಂತ ಚಲನಚಿತ್ರ ನಿರ್ಮಾಪಕ ದಯಾಳ್ ಪದ್ಮನಾಭನ್ ಡಿ ಪಿಕ್ಚರ್ಸ್ ಲಾಂಛನದಲ್ಲಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಶಸ್ತಿ ವಿಜೇತ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ  "ಹಗ್ಗದ ಕೊನೆ", "ಆ ಕರಾಳ ರಾತ್ರಿ", "ತ್ರಯಂಬಕಂ" ಮುಂತಾದ ಚಲನಚಿತ್ರಗಳನ್ನು ನಿರ್ಮಿಸಿರುವ ಡಿ ಪಿಕ್ಚರ್ಸ್ ಸಂಸ್ಥೆಯಿಂದಲೇ "ಕಪಟಿ" ಚಿತ್ರ ಕೂಡ ನಿರ್ಮಾಣವಾಗಿದೆ.

ಡಾರ್ಕ್ ವೆಬ್ ಹಾರರ್ ಮೀಟ್ಸ್ ಸೈಕಲಾಜಿಕಲ್ ಥ್ರಿಲ್ಲರ್ - ಸೈಬರ್ ಕ್ರೈಮ್, ಮಿಸ್ಟರಿ ಮತ್ತು ವಿಲಕ್ಷಣ ಸಸ್ಪೆನ್ಸ್‌ನ ಸಂಗಮವಾಗಿದೆ ಈ ಚಿತ್ರ. ಸುಕೃತಾ ವಾಗ್ಲೆ, ದೇವ್ ದೇವಯ್ಯ ಮತ್ತು ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಜೋಹಾನ್ ಸೇವಾನಾಶ್ ಸಂಗೀತ ನಿರ್ದೇಶನ ಹಾಗೂ ಸಂತೋಷ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣನ್, ಪವನ್ ವೇಣುಗೋಪಾಲ್ ಮುಂತಾದವರಿದ್ದಾರೆ. ಈಗಾಗಲೇ ಟೀಸರ್ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರದ ಟ್ರೇಲರ್ ಫೆಬ್ರವರಿ 27 ರಂದು  ಬಿಡುಗಡೆಯಾಗಲಿದ್ದು, ಮಾರ್ಚ್ 7 ರಂದು ಗ್ರ್ಯಾಂಡ್ ಥಿಯೇಟ್ರಿಕಲ್ ರಿಲೀಸ್ ಆಗಲಿದೆ.