ತಿರುಮಲ - ಐತಿಹಾಸಿಕ ಪ್ರಸಿದ್ಧವಾದ ತಿರುಪತಿ ತಿರುಮಲ ವೆಂಕಟೇಶ್ವರನ ದೇಗುಲದಲ್ಲಿ ಲಡ್ಡು ತುಂಬಾನೇ ಫೇಮಸ್.ಇಂತಹ ಲಡ್ಡುವಿನಲ್ಲಿ ಕಲಬೆರಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕಾರ ಲಡ್ಡುವಿನಲ್ಲಿ ದನ ಹಾಗೂ ಹಂದಿ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸದ್ಯ ಸಿಬಿಐನಿಂದ ಪ್ರತ್ಯೇಕ ಎಸ್ಐಟಿ ತಂಡವನ್ನ ರಚಿಸಲಾಗಿದೆ. ಈ ತಂಡದಲ್ಲಿ ಇಬ್ಬರು ಸಿಬಿಐ ಅಧಿಕಾರಿಗಳು , ಇಬ್ಬರು ಆಂಧ್ರ ಪೊಲೀಸರು ಹಾಗೂ ಆಹಾರ ಸುರಕ್ಷತಾ ಸಿಬ್ಬಂದಿಯೂ ಇರಲಿದ್ದಾರೆ.