ಬಾಗಲಕೋಟೆ : ಕಣ್ ಮಿಟುಕಿಸಿ ಕಣ್ ಬಿಡೋದ್ರಲ್ಲಿ ಕಳ್ಳಿಯರು ಚಿನ್ನದ ಬಳೆಯನ್ನೇ ಎಗರಿಸಿ ಪರಾರಿಯಾಗಿರುವ ಘಟನೆ ಬಾಗಲಕೋಟೆಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಬುರ್ಖಾಧಾರಿ ಮಹಿಳೆಯರು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜ್ಯುವೆಲ್ಲರಿ ಶಾಪ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅಂಗಡಿಯವನ ಬಳಿ ಬಳೆಯ ಡಿಸೈನ್ ತೋರಿಸಿ ಅಂತ ಕೂರ್ತಾರೆ.
ಜ್ಯುವೆಲ್ಲರಿ ಶಾಪ್ ನ ಸಿಬ್ಬಂದಿ ಟ್ರೇನಲ್ಲಿರುವ ಎಲ್ಲಾ ಬಳೆಗಳ ಕಲೆಕ್ಷನ್ ಗಳನ್ನ ತೋರಿಸ್ತಾನೆ. ಇನ್ನೂ ಬೇರೆ ಕಲೆಕ್ಷನ್ ಬೇಕಿದೆ ಎಂಬ ರೀತಿಯಲ್ಲಿ ಕಳ್ಳಿಯರು ಹಾವಭಾವವನ್ನ ತೋರಿಸ್ತಾರೆ. ಜ್ಯುವೆಲ್ಲರಿ ಶಾಪ್ ನ ಸಿಬ್ಬಂದಿ ಆ ಕಡೆ ನೋಡಿ ಈ ಕಡೆನೋಡೋದ್ರೊಳಗೆ ಟ್ರೇನಿಂದ ಚಿನ್ನದ ಬಳೆಯನ್ನ ಎಗರಿಸಿ ಏನೂ ಆಗದೇ ಇರೋ ರೀತಿ ಕೂರ್ತಾರೆ. ನಂತರ ಯಾವುದೇ ಚಿನ್ನಾಭರಣ ಇಷ್ಟವಾಗಿಲ್ಲ ಅಂತ ತಣ್ಣಗೆ ಅಲ್ಲಿಂದ ಕಾಲ್ಕೀಳ್ತಾರೆ.
ಸಂಜೆ ಚಿನ್ನಾಭರಣದ ತೂಕ ಹಾಕೋವಾಗ ಬಳೆಯೊಂದು ಮಿಸ್ ಆಗಿರೋದು ಚಿನ್ನದಂಗಡಿಯ ಮಾಲೀಕನಿಗೆ ತಿಳಿದುಬಂದಿದೆ. ತಕ್ಷಣ ಎಚ್ಚೆತ್ತ ಜ್ಯುವೆಲ್ಲರಿ ಶಾಪ್ ಮಾಲೀಕ ಶಹರ ಪೊಲೀಸ್ ಠಾಣೆಗೆ ಹೋಗಿ ದೂರನ್ನ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದ್ರೂ ಕಳ್ಳಿಯರ ಬಗ್ಗೆ ಮಾಹಿತಿ ದೊರೆತಿಲ್ಲ. ಸಮಯ ಟಿವಿ ಬಳಿ ಕಳ್ಳಿಯರ ಕೈಚಳಕದ ಸಿಸಿಟಿವಿ ಫೂಟೇಜ್ ಇದೆ. ಒಂದು ವೇಳೆ ನಿಮ್ಮ ಶಾಪ್ ಗೂ ಈ ಅನುಮಾನಾಸ್ಪದ ಮಹಿಳೆಯರು ಬೂರ್ಖಾ ಧರಿಸಿ ಬಂದ್ರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.