ಬೆಳಗಾವಿ : ಸಾಲಗಾರರ ಕಾಟಕ್ಕೆ ಬೇಸತ್ತು ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ದಿಗ್ಗೇವಾಡಿ ಗ್ರಾಮದ ಅಪ್ಪಾಸಾಬ್ ಕಂಬಾರ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ರೇಖಾ ಸಮಗಾರ ಹಾಗೂ ಭೀಮು ವಾಳಕೆ ಹೆಸರು ಹೇಳಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರಿಂದ ಅಂದಾಜು 50 ಸಾವಿರ ಸಾಲ ಪಡೆದಿದ್ದ ಅಪ್ಪಾಸಾಬ್, 50 ಸಾವಿರಕ್ಕೆ ಪ್ರತಿಯಾಗಿ ಹೆಚ್ಚವರಿ ಹಣ ಬಡ್ಡಿ ಕೊಟ್ಟಿದ್ದ. ಆದ್ರೆ ಬಡ್ಡಿ ಹಣ ಕೊಟ್ಟರು ಇನ್ನೂ ಹಣ ನೀಡುವಂತೆ ರೇಖಾ ಹಾಗೂ ಭೀಮು ಪೀಡಿಸುತ್ತಿದ್ರಂತೆ. ಹೀಗಾಗಿ ತನ್ನ ಸಾವಿಗೆ ಇಬ್ಬರೆ ಕಾರಣ ಬೇರೆ ಯಾರಿಗೂ ತೊಂದರೆ ನೀಡದಂತೆ ಮನವಿ ಮಾಡಿ ಸೆಲ್ಫಿ ವಿಡಿಯೋ ಮಾಡಿಟ್ಟು ಸೂಸೈಡ್ ಮಾಡಿಕೊಂಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರುಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.