ಭಾರತೀಯ ವೈದ್ಯ ಲೋಕವೆ ಅಚ್ಚರಿ ಪಡುವಂತಹ ಒಂದು ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ... ಇನ್ನು ತಾಯಿಯ ಗರ್ಭದಲ್ಲಿರುವ ಮಗುವಿನ ಹೊಟ್ಟೆಯೊಳಗೆ ಇನ್ನೊಂದು ಮಗುವಿರುವುದು ಪತ್ತೆಯಾಗಿದೆ. ಇದನ್ನ foetus in fetu ಅಂತ ಕರೀತಾರೆ.
ಮಹಾರಾಷ್ಟ್ರದ 32 ವರ್ಷದ ಮಹಿಳೆಯೊಬ್ಬರ 9 ತಿಂಗಳ ಸ್ಕಾನಿಗ್ ಅಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅಚ್ಚರಿ ವಿಚಾರ ಏನಂದ್ರೆ ಕಳೆದ 8 ತಿಂಗಳೂ ಮಾಡಿಸಿದ ಯಾವ ಸ್ಕಾನಿಂಗ್ ಅಲ್ಲಿ foetus in fetu ಇರುವುದು ತಿಳಿದಿರಲಿಲ್ಲ. ಆ ಮಹಿಳೆಗೆ ನಾರ್ಮಲ್ ಡೆಲಿವರಿ ಆಗುವ ಸಾಧ್ಯತೆಗಳಿದ್ದು, ಹುಟ್ಟುವ ಮಗುವಿಗೆ ಆಪರೇಷನ್ ಮಾಡಲೇಬೇಕು ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ ಅವಳಿ ಮಕ್ಕಳು ಇರುವ ಕಾರಣದಿಂದ ಹೀಗಾಗಿರಬಹುದು ಎಂದು ಉಹಿಸಿದ್ದಾರೆ.