ರಾಜ್ಯಾಧ್ಯಕ್ಷರ ಬದಲಾವಣೆಯಾಗಲೇಬೇಕು ಎಂದು, ಬಿಜೆಪಿ ರೆಬೆಲ್ ಶಾಸಕ ಬಿ.ಪಿ.ಹರೀಶ್ ಪಟ್ಟು ಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ರಾಜ್ಯ ಉಸ್ತುವಾರಿಗಳ ಜೊತೆ ಮಾತನಾಡಿದ್ದೇವೆ. ಆಗಲೂ ಹೇಳಿದ್ದೆ, ಈಗಲೂ ಇದೇ ಡಿಮ್ಯಾಂಡ್ ನನ್ನದು. ಪಕ್ಷ ವಿರೋಧಿ ಧೋರಣೆ ತೋರಿದವರು ಅಲ್ಲೇ ಇದ್ದಾರೆ..ಾವರ ಮೇಲೆ ಯಾವುದೇ ಕ್ರಮ ಆಗಿಲ್ಲ. ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಸಿದವರು. ಅವರ ಹೆಸರು ಹೇಳೋಕೆ ನಾಚಿಕೆ ಆಗುತ್ತೆ..ಅಂತವರನ್ನ ಇಟ್ಟುಕೊಂಡಿದ್ದಾರೆ..ನಮ್ಮನ್ನ ಉಚ್ಚಾಟನೆ ಯಾಕೆ ಮಾಡ್ತಾರೆ..ನಾವೇನು ಪಕ್ಷ ವಿರೋಧಿ ಧೋರಣೆ ತಾಳಿಲ್ಲ..ಯಾರು ಏನೆಲ್ಲಾ ಮಾಡ್ತಿದ್ದಾರೆ ಹೈಕಮಾಂಡ್ ಗೆ ಗೊತ್ತಿದೆ..ನಾನು ಪಕ್ಷದ ಪರವಾಗಿ ಇರುವವನು..ಏನೇ ಆದ್ರೂ ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇಬೇಕು ಎಂದು, ಪಟ್ಟು ಹಿಡಿದಿದ್ದಾರೆ.