ಕರ್ನಾಟಕ

ತುಮಕೂರು ಜಿಲ್ಲೆಗೂ ತಟ್ಟಿದ ವಕ್ಫ್ ಬೋರ್ಡ್​ ಬಿಸಿ..!

ಸರ್ಕಾರಿ ಜಮೀನು ವಕ್ಫ್ ಬೋರ್ಡ್​ ಹೆಸರಿಗೆ ಬದಲಾವಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ

ತುಮಕೂರು ಜಿಲ್ಲೆಗೂ ವಕ್ಫ್ ಬೋರ್ಡ್ ಬಿಸಿ ತಟ್ಟಿದಂತಾಗಿದೆ. 2 ಎಕರೆ 34 ಗುಂಟೆಯಷ್ಟು ಸರ್ಕಾರಿ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಬದಲಾವಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೇಸರಮಡು ಗ್ರಾಮದಲ್ಲಿದ್ದ ಸರ್ಕಾರಿ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಆಗಿದೆ ಎನ್ನಲಾಗುತ್ತಿದೆ. 

ಸರ್ಕಾರಿ ಜಮೀನು ಎಂದು ದಾಖಲೆಗಳಲ್ಲಿ ಇತ್ತು. ಆದರೆ ಈಗ ವಕ್ಪ್ ಬೋರ್ಡ್ ಗೆ ಬದಲಾವಣೆ ಆಗಿರೋದನ್ನ ನೋಡಿ ಗ್ರಾಮಸ್ಥರು ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಇದನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.