ಕರ್ನಾಟಕ

ದಲಿತ ಸಿಎಂ, ಹಿಂದುಳಿದ ಸಿಎಂ ಅನ್ನೋ ಪ್ರಶ್ನೆ ಇಲ್ಲಾ.. CM ತಕ್ಷಣ ರಾಜೀನಾಮೆ ಕೊಡ್ಬೇಕು-ಶೆಟ್ಟರ್ ವಾಗ್ದಾಳಿ

ಹೊರಗೆ ನಾನು ಸಿದ್ದರಾಮಯ್ಯ ಜೊತೆಗೆ ಇದ್ದೇವೆ ಅಂತಾ ಹೇಳ್ತಾರೆ. ಒಳಗೊಳಗೆ ಮೀಟಿಂಗ್ ಗಳು ಆರಂಭ ಆಗಿವೆ. ಯಾರು ಮುಖ್ಯಮಂತ್ರಿ ಆಗಬೇಕು ಯಾರಿಗೆ ಎಷ್ಟು ಜನ ಸಪೋರ್ಟ್ ಇದಾರೆ. ಇದೆಲ್ಲಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದು ಹೊರಗೆ ಬಂದಿಲ್ಲ ಮುಂದಿನ ದಿನ ಹೊರಗೆ ಬರುತ್ತೆ.

ಬೆಳಗಾವಿ : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ ಮಾಡಿದೆ. ಬಹುಶಃ ಕರ್ನಾಟಕ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಕ್ಯಾಂ ಯಾವತ್ತೂ ಆಗಿಲ್ಲ. ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ಜನ ರೋಷಿಹೋಗಿದ್ದಾರೆ. ಈ ಕ್ಷಣದಲ್ಲಿ ಚುನಾವಣೆ ಆದ್ರೇ ಬಿಜೆಪಿ ಅಭೂತಪೂರ್ವವಾಗಿ ಗೆದ್ದು ಬರುತ್ತೆ. ಕಾಂಗ್ರೆಸ್ ನ ನಡುವಳಿಕೆ, ಸ್ಕ್ಯಾಂ ನೋಡಿ ಬೇಜಾರಾಗಿ ತಿರಸ್ಕಾರ ಮಾಡಲು ಜನ ಬಂದಿದ್ದಾರೆ. ಇಷ್ಟಾದ್ರೂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕರ್ನಾಟಕ ಉಲ್ಲೇಖಿಸಿ ಮಾತಾಡಿದ್ದಾರೆ. ಕರ್ನಾಟಕ ಎಷ್ಟು ಕುಪ್ರಸಿದ್ಧಿ ಪಡೆದಿದೆ ಸರ್ಕಾರ ಅಂತಾ ಅರ್ಥ ಮಾಡ್ಕೊಬೇಕು. ಎಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತೆ, ಸ್ಕ್ಯಾಂ ಜಾಸ್ತಿ ಆಗುತ್ತೆ ಸರ್ಕಾರಕ್ಕೆ ಕೆಟ್ಟು ಹೆಸರು ಬರುತ್ತೆ. ಅದರಿಂದ ರಾಜ್ಯಕ್ಕೂ ಒಳ್ಳೆ ಹೆಸರು ಬರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಇವತ್ತಿಲ್ಲ ನಾಳೆ ರಾಜೀನಾಮೆ ಕೊಡಲೇಬೇಕು. ಹರಿಯಾಣ ರಿಸಲ್ಟ್ ಬಂದ ಮೇಲೆಯೂ ರಾಜೀನಾಮೆ ಕೊಡಲ್ಲ ಅಂದ್ರೆ. ಬಂಡತನದಿಂದ ರಾಜೀನಾಮೆ ಕೊಡುವುದಿಲ್ಲ ಅಂದ್ರೆ ಜನ ದಂಗೆ ಏಳುವ ಸ್ಥಿತಿ ನಿರ್ಮಾಣ ಆಗುತ್ತೆ. ಕಾಂಗ್ರೆಸ್ ನಲ್ಲಿ ಎಂಟತ್ತು ಜನ ಮುಖ್ಯಮಂತ್ರಿ ಅಭ್ಯರ್ಥಿ ರೆಡಿಯಾಗಿದ್ದಾರೆ. ಅವರ ಪಾರ್ಟಿಯವರೇ ಅವರನ್ನ ಇಳಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.

ಬಿಜೆಪಿಯವರು ಎನೂ ಪ್ರಯತ್ನ ಮಾಡುವುದು ಬೇಕಾಗಿಲ್ಲ. ಹೊರಗೆ ನಾನು ಸಿದ್ದರಾಮಯ್ಯ ಜೊತೆಗೆ ಇದ್ದೇವೆ ಅಂತಾ ಹೇಳ್ತಾರೆ. ಒಳಗೊಳಗೆ  ಮೀಟಿಂಗ್ ಗಳು ಆರಂಭ ಆಗಿವೆ. ಯಾರು ಮುಖ್ಯಮಂತ್ರಿ ಆಗಬೇಕು ಯಾರಿಗೆ ಎಷ್ಟು ಜನ ಸಪೋರ್ಟ್ ಇದಾರೆ. ಇದೆಲ್ಲಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದು ಹೊರಗೆ ಬಂದಿಲ್ಲ ಮುಂದಿನ ದಿನ ಹೊರಗೆ ಬರುತ್ತೆ. ಅನಿವಾರ್ಯವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ. ಗೌರವಯುತವಾ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡುವುದು ಒಳ್ಳೆಯದು.

ದಲಿತ ಸಿಎಂ, ಹಿಂದುಳಿದ ಸಿಎಂ ಅನ್ನೋ ಪ್ರಶ್ನೆ ಇಲ್ಲಾ. ಈ ನೆಪದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಸ್ಟಾರ್ಟ್ ಮಾಡಿದ್ದಾರೆ. ಸಿದ್ದರಾಮಯ್ಯ ಇಳಿಸಬೇಕು ಅನ್ನೋದು ಸ್ಟಾರ್ಟ್ ಆಗಿದೆ. ಇದನ್ನ ಅರ್ಥ ಮಾಡಿಕೊಂಡು ಸಿದ್ದರಾಮಯ್ಯ ನವರು ರಾಜೀನಾಮೆ ಕೊಡಲಿ. ತಮಗೆ ಬೇಕಾದವರನ್ನ ಬೇಕಾದ ವ್ಯಕ್ತಿಯನ್ನ ಸಿಎಂ ಮಾಡಿದ್ರೆ ಒಳ್ಳೆಯದು ಎಂದು ಹೇಳಿದ್ದಾರೆ.