ಕರ್ನಾಟಕ

ಸರಗಳ್ಳತನ ಆರೋಪಿ ಅರೆಸ್ಟ್..ಚಿನ್ನ, ಬೈಕ್‌ಗಳು ವಶಕ್ಕೆ..!

ಮೈಸೂರಿನ ಸರಸ್ವತಿಪುರಂ ಪೊಲೀಸರ ಭಜರಿ ಬೇಟೆಯಲ್ಲಿ, ಸರಗಳ್ಳತನ ಮಾಡುತ್ತಿದ್ದ ಕಳ್ಳ ಸೆರೆಯಾಗಿದ್ದಾನೆ.

ಮೈಸೂರಿನ ಸರಸ್ವತಿಪುರಂ ಪೊಲೀಸರ ಭಜರಿ ಬೇಟೆಯಲ್ಲಿ, ಸರಗಳ್ಳತನ ಮಾಡುತ್ತಿದ್ದ ಕಳ್ಳ ಸೆರೆಯಾಗಿದ್ದಾನೆ. ಕಳ್ಳನಿಂದ ಒಟ್ಟು 5 ಲಕ್ಷ 13 ಸಾವಿರದ 200 ರೂ. ಮೌಲ್ಯದ 43 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 

ಕಳೆದ ತಿಂಗಳು ಅಕ್ಟೋಬರ್‌ 14ರಂದು, ಬಸವೇಶ್ವರನಗರದ 1ನೇ ರಸ್ತೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರು, ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದು ಸರ ಕಿತ್ತುಕೊಂಡು ಹೋಗಿದ್ದರು. ಈ ಬಗೆ  ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಬೋಗಾದಿಯ ರಿಂಗ್‌ ರಸ್ತೆ ಬಳಿ ಇರುವ ನಾಗಲಿಂಗೇಶ್ವರ ದೇವಸ್ಥಾನದ ಬಳಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.  ಆರೋಪಿಯಿಂದ ಸುಮಾರು 43 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಒಟ್ಟು  2,51,000 ರೂಗಳು ಹಾಗೂ 4 ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ.