ಕರ್ನಾಟಕ

ಹಾರೆಯಿಂದ ಅಂಗಡಿ ಬಾಗಿಲು ಮೀಟಿ ಕಳವು..!

ಹಾರೆಯಿಂದ ಅಂಗಡಿ ಬಾಗಿಲು ಮೀಟಿ ಕಳ್ಳತನ ಮಾಡಿರೋ ಘಟನೆ ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿ ನಡೆದಿದೆ.

ಮಂಡ್ಯ : ಹಾರೆಯಿಂದ ಅಂಗಡಿ ಬಾಗಿಲು ಮೀಟಿ ಕಳ್ಳತನ ಮಾಡಿರೋ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿ ನಡೆದಿದೆ. ಗಂಗಾಧರ ಎಂಬುವರಿಗೆ ಸೇರಿದ ದೀಕ್ಷಿತ್ ಕೂಲ್ ಪಾರ್ಲರ್ ಗೆ ಕನ್ನ ಹಾಕಿದ ಖದೀಮರು, ಅಂಗಡಿ‌ ಒಳಗಿದ್ದ ನಗದು ಸೇರಿ ಸಿಗರೇಟ್ ಬಂಡಲ್ ಎಗರಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ , ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.