ಈ ವಾರ ಕನ್ನಡ ಬಿಗ್ ಬಾಸ್ ಸಖತ್ ಇಂಟರೆಸ್ಟಿಂಗ್ ಆಗಿತ್ತು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಜಗಳ, ಕಣ್ಣೀರು, ಬೇಸರ ಜೊತೆಗೆ ಒಂದಷ್ಟು ಖುಷಿ ಎಲ್ಲವೂ ಮಿಕ್ಸ್ ಆಗಿತ್ತು. ಮನೆಯ ಅಣ್ಣ-ತಂಗಿಯಂತಿದ್ದ ಉಗ್ರಂ ಮಂಜು ಹಾಗೂ ಮೋಕ್ಷಿತಾ ನಡುವೆಯೇ ಬಿಗ್ ಬಾಸ್ ಟಾಸ್ಕ್ ನೀಡಿದ್ರು. ಈಗಾಗ್ಲೇ ಕೆಲವು ದಿನಗಳಿಂದ ಮಂಜು, ಮೋಕ್ಷಿತಾ ನಡುವೆ ವೈಮನಸ್ಸು ಹೆಚ್ಚಾಗ್ತಿದೆ. ಹೀಗಿರೋವಾಗ್ಲೇ ಬಿಗ್ ಬಾಸ್ ಇಬ್ಬರಿಗೂ ಪ್ರತ್ಯೇಕ ಟೀಂ ಮಾಡಿ ಟಾಸ್ಕ್ ಕೊಟ್ಟಿದ್ದು, ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಟಾಸ್ಕ್‌ಗಾಗಿ ಎರಡೂ ಟೀಂ ನಡುವೆ ನಡೆದ ಗುದ್ದಾಟ ಜೋರಾಗೆ ಸದ್ದು ಮಾಡಿದೆ. ಇದರ ನಡುವೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರೋ ರಜತ್ ಚೈತ್ರಾ ಕುಂದಾಪುರ ಮೇಲೆ ಕಣ್ಣಿಟ್ಟಿದ್ದಾರೆ. ಅಂದ್ರೆ ಅವರನ್ನೇ ಮನೆಯಿಂದ ಕಳಿಸಬೇಕು ಅನ್ನೋ ಪ್ಲಾನ್ ನಲ್ಲಿ ಇದ್ದಾರೆ.
ಹೌದು, ಕಳೆದ ವಾರದಿಂದ ರಜತ್ ಚೈತ್ರಾ ನಡುವೆ ದೊಡ್ಡ ಸಮರವೇ ನಡೀತಿದೆ. ಮಾತೆತ್ತಿದ್ರೆ ಚೈತ್ರಾಗೆ ನಮ್ ಬಾಸ್, ನಮ್ ಬಾಸ್ ಅಂತಲೇ ಕಾಲೆಳೆಯುತ್ತಿರುವ ರಜತ್, ನಿಮ್ಮನ್ನ ಇಲ್ಲಿಂದ ಕಳಿಸಿಯೇ ನಾನು ಹೋಗೋದು ಅಂತಾ ಚಾಲೆಂಜ್ ಹಾಕಿದ್ದಾರೆ. ಈಗಾಗ್ಲೇ ಕಿಚ್ಚನ ಕ್ಲಾಸ್‌ನಿಂದ ಸುಸ್ತಾಗಿರೋ ಚೈತ್ರಾಗೆ, ರಜತ್ ಕಾಲು ಕೆರೆದುಕೊಂಡು ಹೋಗ್ತಿದ್ರೂ ಸೈಲೆಂಟ್ ಆಗಿರೋ ಪರಿಸ್ಥಿತಿ ಬಂದಂತೆ ಕಾಣ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಜತ್ ಇದನ್ನೇ ಒಳ್ಳೆ ಚಾನ್ಸ್ ಎಂದುಕೊಂಡ್ರೋ ಏನೋ.. ಚೈತ್ರಾ, ಮಂಜು ಸೇರಿ ಇನ್ನೂ ಹಲವರ ಮೇಲೆ ಎಗರಾಡ್ತಿದ್ದಾರೆ.
ಇನ್ನು ಈ ವಾರ ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಭವ್ಯಾ ಗೌಡ, ಶಿಶಿರ್, ಐಶ್ವರ್ಯಾ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಅವರು ನಾಮಿನೇಟ್ ಆಗಿದ್ದಾರೆ. 7 ಜನರ ಪೈಕಿ ಈ ವಾರ ಒಬ್ಬರಂತೂ ಮನೆಯಿಂದ ಹೊರಗೆ ಹೋಗೋದು ಡೌಟ್. ಇದರ ನಡುವೆ ಕಳಪೆ ಸ್ಪರ್ಧಿಯಾಗಿ ಜೈಲು ಸೇರಿರುವ ಶೋಭಾ ಬಳಿ, ಚೈತ್ರಾ ಕುಂದಾಪುರ ಈ ಮನೆಯಲ್ಲಿ ಮುಂದೆ ನಾನು ಇರುತ್ತೇನೋ ಇಲ್ಲವೋ ಎಂದು ಕಣ್ಣೀರು ಹಾಕಿದ್ದಾರೆ. ಹೀಗಾಗಿ ಈ ವಾರ ಮನೆಯಿಂದ ಹೊರ ಹೋಗೋ ಸ್ಪರ್ಧಿ ಯಾರು ಅನ್ನೋ ಕುತೂಹಲ ಎಲ್ಲರಿಗೂ ಜಾಸ್ತಿಯಾಗಿದೆ.